ನಾವೂರು: ಮಂಜಳ ನಿವಾಸಿ ಶತಾಯುಷಿ ಸಂಕಮ್ಮ ನಿಧನ

0

ನಾವೂರು ಗ್ರಾಮದ, ಮಂಜಳ ನಿವಾಸಿ ಮಲೆಕುಡಿಯ ಸಮುದಾಯದ ಹಿರಿಯಜ್ಜಿ , ಶತಾಯುಷಿ ಸಂಕಮ್ಮ (108) ಡಿ.28 ರಂದು ಸ್ವಗೃಹದಲ್ಲಿ ನಿಧನರಾದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಸೇರಿದಂತೆ ಇಡೀ ಮಲೆಕುಡಿಯ ಸಮುದಾಯದಲ್ಲಿಯೇ ಹಿರಿಯಜ್ಜಿ ಎಂಬ ಹೆಗ್ಗಳಿಕೆ ಇವರದು. ಇವರು 4 ಗಂಡು ಮಕ್ಕಳಾದ ಗಿರಿಯಪ್ಪ ಮಲೆಕುಡಿಯ , ರುಕ್ಮಯ್ಯ ಮಲೆಕುಡಿಯ , ಡಾಕಯ್ಯ ಮಲೆಕುಡಿಯ , ನೋಣಯ್ಯ ಮಲೆಕುಡಿಯ ,3 ಹೆಣ್ಣು ಮಕ್ಕಳಾದ ಚಿನ್ನಮ್ಮ , ಸೇಸಮ್ಮ , ರತ್ನ ಮತ್ತು 21 ಮೊಮ್ಮಕ್ಕಳು , 6 ಜನ ಮರಿಮಕ್ಕಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here