ಹೊಕ್ಕಾಡಿಗೋಳಿ: ವೀರ – ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

0


ಹೊಕ್ಕಾಡಿಗೋಳಿ: ಜಿಲ್ಲೆಯಲ್ಲಿ ರಾಜಾಶ್ರಯ ಬಳಿಕ ಕೃಷಿಕರಿಂದ ಆರಂಭಗೊಂಡ ಕಂಬಳ ಕ್ರೀಡೆಗೆ ಪ್ರಸಕ್ತ ಹೈಟೆಕ್ ಸ್ಪರ್ಶ ಸಿಕ್ಕಿದೆ. ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು ಇದೆ ಎಂದು ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಹೇಳಿದ್ದಾರೆ.

ಇಲ್ಲಿನ ಸಿದ್ಧಕಟ್ಚೆ ಸಮೀಪದ ಪೂಂಜ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಡಿ.17ರಂದು ಆರಂಭಗೊಂಡ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಿದ್ಧಕಟ್ಟೆ ಯುವ ವೈದ್ಯ ಡಾ.ಸುದೀಪ್ ಜೈನ್, ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಆರಂಬೋಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಗತ್ಪಾಲ ಶೆಟ್ಟಿ ಉಮನೊಟ್ಟು, ಕುಕ್ಕಿಪಾಡಿ ಗ್ರಾ.ಪಂ.ಉಪಾಧ್ಯಕ್ಷ ಯೋಗೀಶ ಆಚಾರ್ಯ ಶುಭ ಹಾರೈಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಪ್ರಧಾನ ಸಂಚಾಲಕ ರಾಜೇಶ ಶೆಟ್ಟಿ ಕೊನೆರೊಟ್ಟು, ಕೋಶಾಧಿಕಾರಿ ಎಚ್.ಹರೀಶ ಹಿಂಗಾಣಿ, ಕಾರ್ಯದರ್ಶಿ ಪುಷ್ಪರಾಜ್ ಜೈನ್ ನಡ್ಯೋಡಿ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂಚಾಲಕರಾದ ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಪ್ರಭಾಕರ ಎಚ್.ಹುಲಿಮೇರು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ಧನ ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಪ್ಪಣೀತ್ ಹಿಂಗಾಣಿ , ಸ್ಥಳದಾನಿಗಳಾದ ಸುಧೀರ್ ಶೆಟ್ಟಿ, ಗುಮ್ಮಣ್ಣ ಶೆಟ್ಟಿ, ಸುಧಾಕರ ಚೌಟ ಬಾವ, ಪ್ರವೀಣ ಕುಲಾಲ್, ಹರೀಶ ಶೆಟ್ಟಿ, ಮಹಾವೀರ ಚೌಟ, ಬಾಬು ಶೆಟ್ಟಿ ಕೊಲ್ಯ, ಸುಂದರ ಪೂಜಾರಿ ಮತ್ತಿತರರು ಇದ್ದರು.

ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಗೌರವ ಸಲಹೆಗಾರ ವಕೀಲ ಸುರೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here