“ಶಿಕ್ಷಣ ಶ್ರೇಷ್ಠ ಸಂಪತ್ತು” ಅನುಗ್ರಹದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಝಿ

0

ಬೆಳ್ತಂಗಡಿ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಶಾಲಾಸಭಾಭವನದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್‌ರವರಾದ ಪರಮ ಪೂಜ್ಯ ಡಾ. ಲಾರೆನ್ಸ್ ಮುಕ್ಕುಝಿಯವರ ಘನ ಅಧ್ಯಕ್ಷತೆಯಲ್ಲಿ ಡಿ.16ರಂದು ನಡಯಿತು. ಶಾಲಾ ಮಕ್ಕಳ ಪ್ರಾರ್ಥನೆಯ ನಂತರ ಶಾಲಾ ಸಂಚಾಲಕರಾದ ವಂ| ಫಾ| ಜೇಮ್ಸ್ ಡಿ’ಸೋಜ ರವರು ಸ್ವಾಗತ ಭಾಷಣವನ್ನು ನೀಡಿದರು. ಶಾಲಾ ಪ್ರಾಚಾರ್ಯರಾದ ವಂ| ಫಾ| ವಿಜಯ್ ಲೋಬೋ ಶಾಲಾ ವರದಿಯನ್ನು ವಾಚಿಸಿದರು. ಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಸಂದೇಶವನ್ನು ವಾಚಿಸಲಾಯಿತು.

ಬಹುಮಾನ ವಿತರಣೆಯ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಸೂಕ್ತ ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಕರಾದ ವಸಂತ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳು ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಾದ ಡಾ. ಅಶ್ವಿನ್ ಉದ್ಯಾವರ್ ಎಮ್.ಡಿ. ಇವರನ್ನು ಸನ್ಮಾನಿಸಲಾಯಿತು. ಇನ್ನೋರ್ವ ಮುಖ್ಯ ಅತಿಥಿ ಎಸ್.ಎಲ್.ಬೋಜೇ ಗೌಡ ಎಮ್.ಎಲ್.ಸಿ ಇವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ಪ್ರಭಾಕರ ಶೆಟಗಟಿಯವರು ವಾಚಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತಾಡಿ ಆಶೀರ್ವಚನ ನೀಡಿದ ಪರಮ ಪೂಜ್ಯ ಬಿಷಪ್‌ರವರು ಶಿಕ್ಷಣವು ಶ್ರೇಷ್ಠ ಸಂಪತ್ತು. ವ್ಯಕ್ತಿಯ ವ್ಯಕ್ತಿತ್ವ ವಿಕಸನವು ಶಿಕ್ಷಣದಿಂದ ಸಾದ್ಯ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗುವಂತಹ ಶಿಕ್ಷಣವನ್ನು ನೀಡಬೇಕೆಂದು ಹೇಳುತ್ತಾ ಮಕ್ಕಳಿಗೆ ದೇಶಾಭಿಮಾನದ ವಾಕ್ಯಗಳನ್ನು ಬೋಧಿಸಿದರು.


ವಿಶೇಷ ದೇಣಿಗೆಯನ್ನು ನೀಡಿದ ಮಹನೀಯರನ್ನು ಗುರುತಿಸಲಾಯಿತು. ವೇದಿಕೆಯಲ್ಲಿ ಚರ್ಚ್‌ಪಾಲನಾ ಮಂಡಳಿ ಉಪಾಧ್ಯಕ್ಷರಾದ ಆಂಟನಿ ಫೆರ್ನಾಂಡೀಸ್, ಪಾಲಕ ಪೋಷಕ ಸಂಘದ ಉಪಾಧ್ಯಕ್ಷರಾದ ಆನಂದಕೃಷ್ಣ, ಆಡಳಿತ ಮಂಡಳಿಯ ಸದಸ್ಯ ಪ್ರವೀಣ್ ಫೆರ್ನಾಂಡೀಸ್, ಪ್ರಾಥಮಿಕ ವಿಭಾಗದ ರವಿ ಕುಮಾರ್, ವಿದ್ಯಾರ್ಥಿ ನಾಯಕರಾದ ಕ್ಲೀಟಸ್, ಶಾನ್ ಹಾಗೂ ರೋಸಾ ರವರು ಉಪಸ್ಥಿತರಿದ್ದರು. ಶಿಕ್ಷಕಿ ವಿನಯಲತಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಭಗಿನಿ ಸ್ನೇಹಾ ರವರು ಧನ್ಯವಾದವನಿತ್ತರು. ಅಪರಾಹ್ನ ಶಾಲಾ ಮಕ್ಕಳಿಂದ ವೈವಿದ್ಯಮಯವಾದ ಮನೋರಂಜನಾ ಕಾರ್ಯಕ್ರಮವು ಜರಗಿತು.

p>

LEAVE A REPLY

Please enter your comment!
Please enter your name here