ಬೆಳ್ತಂಗಡಿ ರೋಟರಿ ಕ್ಲಬ್‌ವತಿಂದ 15 ಮಂದಿ ವಿಕಲಚೇತರಿಗೆ ಗಾಲಿ ಕುರ್ಚಿ ಹಸ್ತಾಂತರ

0




ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಈ ವರ್ಷದ ರೋಟರಿಯ ಪ್ರಮುಖ ಯೋಜನೆಗಳಾದ ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ೧೫ ಮಂದಿ ಆಯ್ದ ವಿಕಲಚೇತನ ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ ವಿತರಣೆ ಕಾರ್ಯಕ್ರಮ ಡಿ.15ರಂದು ಕಾಶಿಬೆಟ್ಟು ಅರಳಿಯ ರೋಟರಿ ಭವನದಲ್ಲಿ ಜರುಗಿತು.

ರೋಟರಿ ಜಿಲ್ಲೆ 3181ರ 2022-23ನೇ ಸಾಲಿನ ಜಿಲ್ಲಾ ಗವರ್ನರ್ ರೋ| ಎನ್. ಪ್ರಕಾಶ್ ಕಾರಂತ್ ಅವರು ವಿಶೇಷಚೇತನರಿಗೆ ಗಾಲಿ ಕುರ್ಚಿಯನ್ನು ವಿತರಿಸಿ ಮಾತನಾಡಿ, ವಿಕಲಚೇತನ ಎಂಬುದು ಶಾಪವಲ್ಲ, ಅವರಿಗೆ ಎಲ್ಲಾ ರೀತಿಯ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ಸಂಘ-ಸಂಸ್ಥೆಯ ಹಾಗೂ ಸಮಾಜದ ಜವಾಬ್ದಾರಿಯಾಗಿದೆ. ಬೆಳ್ತಂಗಡಿ ರೋಟರಿ ಕ್ಲಬ್ ಇಂದು ೧೫ ಮಂದಿಗೆ ಗಾಲಿ ಕುರ್ಚಿ ವಿತರಿಸುವ ಮೂಲಕ ದೊಡ್ಡ ಸಾಧನೆ ಮಾಡಿದೆ ಇದು ರೋಟರಿ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ| ಮನೋರಮ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಸಹಾಯಕ ಗವರ್ನರ್ ರೋ, ಮೇಜರ್ ಡೋನರ್ ಮೇಜರ್ ಜನರಲ್ ಎಂ.ಎ.ಭಟ್ (ನಿವೃತ್ತ), ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಗ್ನೇಶ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ವತಿಯಿಂದ ಬೆಳಗ್ಗೆ ವಿದ್ಯಾಸಿರಿ ಯೋಜನೆಯಡಿಯಲ್ಲಿ ಸೆಲ್ಕೊ ಹಾಗೂ ದಾನಿಗಳ ನೆರವಿನೊಂದಿಗೆ ಗುರುವಾಯನಕ ಸರಕಾರಿ ಪಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್‌ನ್ನು ಶಾಲೆಗೆ ಹಸ್ತಾಂತರ, ಅರಣ್ಯ ಇಲಾಖೆ ಹಾಗೂ ಕಾಲೇಜಿನ ರೆಡ್ ಕ್ರಾಸ್ ವಿಭಾಗದೊಂದಿಗೆ ಜಂಟಿಯಾಗಿ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಆವರಣದಲ್ಲಿ ರೋಟರಿ ಕ್ಲಬ್ ವನಸಿರಿ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ವೃಕ್ಷವಾಟಿಕಾ ಆರ್ಬೋರೇಟಂ ಕಾಮಗಾರಿಗೆ ಚಾಲನೆಯನ್ನು ಜಿಲ್ಲಾ ಗವರ್ನರ್ ಅವರು ನೆರವೇರಿಸಿದರು.

LEAVE A REPLY

Please enter your comment!
Please enter your name here