ನೆರಿಯ : ಗಂಡಿಬಾಗಿಲಿನ ಸೆಂಟ್ ತೋಮಸ್ ಚರ್ಚ್ ನಲ್ಲಿ ಇಂದು ಬೆಳ್ತಂಗಡಿ ಧರ್ಮ ಪ್ರಾಂತಿಯ ಯುವ ಜನತೆ ಯಒಂದು ದಿನದ ಸಮಾವೇಶ ಯಶಸ್ವಿ ಯಾಗಿ ನಡೆಸಲಾಯಿತು.
ಬೆಳಗ್ಗಿನ ಧಾರ್ಮಿಕ ವಿದಿ ವಿಧಾನಗಳ ನಂತರ ಬೆಳ್ತಂಗಡಿ ಧರ್ಮಪ್ರಾಂತಿಯ ಯುವ ಜನ ನಿರ್ದೇಶಕರಾದ ವಂದನಿಯ ಫಾದರ್ ಜೋಸೆಫ್ ಚೀರನ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭ ವನ್ನು ಎಸ್ ಎ ಬಿ ಎಸ್ ಸನ್ಯಾಸಿನಿ ಪ್ರೊವಿನ್ಸಿಯಲ್ ಕೌನ್ಸಲರ್ ವಂದನಿಯ ಸಿಸ್ಟೆರ್ ಕ್ಲಾರಿಸ್ ಉದ್ಘಾಟಿಸಿದರು.ಗಂಡಿಬಾಗಿಲಿನ ಫಾಧರ್ ಶಾಜಿ ಮಾತ್ಯು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ವಿವಿಧ ಧರ್ಮ ಕೇಂದ್ರ ಗಳ ನೂರಾರು ಯುವಜನರು ಈ ಸಮಾವೇಶ ದಲ್ಲಿ ಬಾಗವಹಿಸಿದರು. ಸೈಬರ್ ಕ್ರೈಮ್ ಮತ್ತು ಯುವಜನತೆ ಈ ವಿಷಯದಲ್ಲಿ ವಿವದ ಮಾಹಿತಿಗಳನ್ನು ಕೇರಳ ಉಚ್ಛ ನ್ಯಾಯಾಲಯದ ನ್ಯಾಯ ವಾದಿ. ಶ್ರೀ ಜಿಜಿಲ್ ಜೋಸೆಫ್ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ಕಾರ್ಯಗಾರ ನಡೆಸಿದರು. ಆದ್ಯಾತ್ಮ ಮತ್ತು ಯುವಜನತೆ ಈ ವಿಷಯದಲ್ಲಿ ವಂದನಿಯ ಫಾಧರ್ ಅಖಿಲ್ ಮುಕ್ಕುಯಿ ವಿಷಯ ಮಂಡನೆ ಮಾಡಿದರು. ಸಿಸ್ಟರ್ ಲಿಸ್ಬಿನ್ ಪರಮಪ್ರಸಾದ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮ ದಲ್ಲಿ ಎಸ್ ಎಂ ವೈ ಎಂ ಪ್ರಾಂತಿಯ ಅಧ್ಯಕ್ಷ ಶ್ರೀ ಸುನಿಲ್ ಮೂಲನ್ ಗಂಡಿ ಬಾಗಿಲಿನ ಶ್ರೀ ಮಿಥುನ್ ಧರ್ಮಗುರುಗಳಾದ ವಂದನಿಯ ಫಾದರ್ ಸನಿಶ್,ವಂದನಿಯ ಫಾದರ್ ಸಿರಿಲ್,ವಂದನಿಯ ಫಾದರ್ ಜಿನ್ಸ್,ವಂದನಿಯ ಫಾದರ್ ಜೋಸ್ ಪೂವತಿ೦ಕಲ್ ಕಾರ್ಯಕ್ರಮದಲ್ಲಿ ಬಾಗವಹಿಸಿದರು ಸಿಸ್ಟೆರ್ ಶೆರಿನ್ ಸ್ವಾಗತಿಸಿ ಶಿಜು ಚೇಟ್ಟುತಡತಿಲ್ ಕಾರ್ಯಕ್ರಮ ನಿರೂಪಿಸಿದರು