ಬಲ್ಲಂಗೇರಿ ದೇವಸ್ಥಾನ: ನಿಧಿಕುಂಭ ಪ್ರತಿಷ್ಠೆ-ಧಾರ್ಮಿಕಸಭೆ: ಕ್ಷೇತ್ರದ ಜೀರ್ಣೋದ್ಧಾರಕ್ಕೆ ರೂ. 50 ಲಕ್ಷ: ಶಾಸಕ ಹರೀಶ್ ಪೂಂಜ

0

ವೇಣೂರು : ಶಿಥಿಲಗೊಂಡ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ನಮಗೆ ಅವಕಾಶ ದೊರೆಯುತ್ತಿರುವುದು ಪೂರ್ವಜನ್ಮದ ಪುಣ್ಯದ ಫಲ ಎಂದು ತಿಳಿದುಕೊಳ್ಳಬೇಕು. ಶ್ರಮದಾನ, ಸಮಯದಾನ, ಧನದಾನದ ಮೂಲಕ ಗ್ರಾಮದ ಪ್ರತೀ ಮನೆಮನೆಯಿಂದಲೂ ಪುಣ್ಯಕಾರ್ಯಗಳಲ್ಲಿ ಪಾಲು ಪಡೆಯುವಂತಾಗಬೇಕು, ಕ್ಷೇತ್ರದ ಅಭಿವೃದ್ಧಿಗೆ ರೂ. ೫೦ ಲಕ್ಷ ಅನುದಾನ ಒದಗಿಸಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಹೊಸಂಗಡಿ ಗ್ರಾಮದ ಬಲ್ಲಂಗೇರಿ ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಹಾಗೂ ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ನ.28 ರಂದು ಜರುಗಿದ ನಿಧಿಕುಂಭ ಪ್ರತಿಷ್ಠೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಎಲ್ಲರು ಒಗ್ಗಟ್ಟಾಗಿ ಬಲ್ಲಂಗೇರಿ ಅತೀ ಹೆಚ್ಚು ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಲಿದ್ದು, ಇದಕ್ಕಾಗಿ ಎಲ್ಲರು ಒಗ್ಗಟ್ಟಾಗಬೇಕು. ಜೀರ್ಣೋದ್ಧಾರದಿಂದ ಊರಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮನೆಮಾಡಲಿದೆ ಎಂದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಸಮಾರಂಭ ಉದ್ಘಾಟಿಸಿ, ಸೀಮೆಯ ಏಕೈಕ ಸೂರ್ಯನಾರಾಯಣ ಕ್ಷೇತ್ರದಲ್ಲಿ ಆದಷ್ಟು ಶೀಘ್ರ ಬ್ರಹ್ಮಕಲಶೋತ್ಸವ ನೆರವೇರಲಿ ಎಂದರು.

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್, ಶ್ರೀ ಕ್ಷೇತ್ರ ಪೂಂಜದ ವೇ|ಮೂ| ಕೃಷ್ಣಪ್ರಸಾದ ಅಸ್ರಣ್ಣ, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಶ್ರೀ ಕ್ಷೇತ್ರ ಧ.ಗ್ರಾ.ಯೋ. ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಸಂತ ಸಾಲ್ಯಾನ್, ಶಂಕರ ಭಟ್ ಬಾಲ್ಯ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ, ಕ್ಷೇತ್ರದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಎನ್. ಸೀತಾರಾಮ ರೈ, ಸರೋಜಾ ಜಿ. ಜೈನ್, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ ಎಸ್., ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್, ಕಾರ್ಯದರ್ಶಿ ಧನ್‌ರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಪಿ., ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಪ್ರಜ್ವಲ್ ಭಟ್ ಮದಕುಡೆ, ಸುಧಾಕರ ಪೂಜಾರಿ ನೂಯಿ, ಪ್ರತೀಶ್ ಪೂಜಾರಿ ಹೊಸಂಗಡಿ, ಸತೀಶ್ ಶೆಟ್ಟಿ ಬರಮೇಲು, ರಾಜು ಶೆಟ್ಟಿ ಬಲ್ಲಂಗೇರಿ, ವಿದ್ಯಾನಂದ ಜೈನ್ ಎರ್ಮೋಡಿ, ಪಂ. ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಪ್ರಕಾಶ್ ದೇವಾಡಿಗ, ಜಗದೀಶ್ ಹೆಗ್ಡೆ, ಕಮಲ ಮತ್ತಿತರರು ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ ಸ್ವಾಗತಿಸಿ, ವಿಠಲ ಸಿ. ಪೂಜಾರಿ ವಂದಿಸಿದರು. ಸಂತೋಷ್ ಕುಲಾಲ್ ಸಿದ್ದಕಟ್ಟೆ ನಿರೂಪಿಸಿದರು. ನಡ್ವಂತಾಡಿ ಉದಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು.

LEAVE A REPLY

Please enter your comment!
Please enter your name here