​ಚಾರ್ಮಾಡಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನಾಚರಣೆ

0

​ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನಾಚರಣೆಯು ಸ್ಥಳೀಯ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಭ್ರಮದಿಂದ ಜರುಗಿತು.​

ಕಾರ್ಯಕ್ರಮದಲ್ಲಿ ಚಾರ್ಮಾಡಿಯ ಪ್ರಗತಿಪರ ಕೃಷಿಕರು ಹಾಗೂ ಮುಂಡಾಜೆ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ್ ನಾರಾಯಣ್ ರಾವ್ ಕೆ ಮಠದಮಜಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.​

ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಘಟಕದ ಉಪಾಧ್ಯಕ್ಷರಾದ ಪಂಚೇಶ್ ಪೊಂಗರದಡಿ ಉಪಸ್ಥಿತರಿದ್ದರು. ಸಹಸಂಯೋಜಕ ಯೋಗೀಶ್ ಕಾರ್ಯಕ್ರಮದ ವಿವರ ನೀಡಿದರು.

ರಾಜೇಶ್ ಬಾಂಗ್ಲಾಗುಡ್ಡೆ ಚಾರ್ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಘಟಕ ಸಮಿತಿಯ ಸದಸ್ಯರು ಹಾಗೂ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here