ಬೆಳ್ತಂಗಡಿ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಬೆಳ್ತಂಗಡಿಯ ನಮ್ರತಾ ಎಂ. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ವಿದ್ಯಾ ಮನೋಜ್ ಶಿಷ್ಯೆ, ಬೆಳ್ತಂಗಡಿ ಹಳೆಕೋಟೆ ಪುಷ್ಯರಾಗ ನವೀನ್ ಅಲೆವೂರಾಯ ಭಟ್ ಮತ್ತು ಹೇಮಲತಾ ನವೀನ್ ರವರ ಪುತ್ರಿ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಐ. ಎಸ್. 3ನೇ ವರ್ಷದ ವಿದ್ಯಾರ್ಥಿನಿ.