ಗುರುವಾಯನಕೆರೆ: ಶಾರದಾ ನಗರದ ಶಾರದಾ ಮಂಟಪದಲ್ಲಿ ಯಕ್ಷಗಾನ ನಾಟ್ಯ ತರಬೇತಿಯು ಉದ್ಘಾಟನೆಗೊಂಡಿತು. ಶಾರದಾ ಮಂಡಳಿಯ ಅಧ್ಯಕ್ಷೆ ರೀತಾ ವೈ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಪಂಚಾಯತ್ ಸದಸ್ಯ ಮಂಜುನಾಥ್ ಕುವೆಟ್ಟು, ರಚನಾ ಕೆ. ಕುವೆಟ್ಟು, ಗೆಳೆಯರ ಬಳಗದ ಕಾರ್ಯದರ್ಶಿಗಳು, ಹಾಗೆಯೇ ಶುಭಾಮಣಿ ಯುವಜನ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಯಕ್ಷಗಾನ ನಾಟ್ಯ ಶಿಕ್ಷಕ ದೇವಿಪ್ರಸಾದ್ ಗುರುವಾಯನಕೆರೆ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆ ತಿಳಿಸಿಕೊಟ್ಟರು. ಮುಂದಿನ ದಿನಗಳಲ್ಲಿ ಪ್ರತಿ ಶನಿವಾರ ಸಂಜೆ 4 ರಿಂದ 5 ರವರೆಗೆ ಯಕ್ಷಗಾನ ನಾಟ್ಯ ತರಗತಿ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದರು.