

ಕಾರ್ಕಳ: ಮುಟ್ಲುಪಾಡಿ ನಡುಮನೆ ಪ್ರೀತಂ ಶೆಟ್ಟಿ(26) ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅಲ್ಲಿ ಕಬ್ಬಡ್ಡಿ ಆಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸುವ ವೇಳೆ ಹೃದಯ ನೋವು ಕಡಿಮೆ ಆಯ್ತು ಅಂತ ವಾಪಾಸ್ ಬರುವ ವೇಳೆ ಹೃದಯಘಾತವಾಗಿದೆ.
ಪ್ರೀತಮ್ ಶೆಟ್ಟಿ ಗುರುವಾಯನಕೆರೆಯ ಸಾಯಿ ರಾಮ್ ಫ್ರೆಂಡ್ಸ್ ತಂಡದ ಆಹ್ವಾನಿತ ಆಟಗಾರರಾಗಿದ್ರು. ಎಸ್. ಡಿ. ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು. ಕಬಡ್ಡಿ ಆಟದ ನಿಮಿತ್ತ ಮಂಡ್ಯಕ್ಕೆ ತೆರಳಿದ್ದ ಪ್ರೀತಮ್ ಶೆಟ್ಟಿ ಆಟದ ನಡುವೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿಧನರಾಗಿದ್ದಾರೆ.