

ಬೆಳ್ತಂಗಡಿ: ಕನ್ನಡ ಫಿಲಂ ಚೇಂಬರ್ ಕಮಿಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ. 25 ರಂದು ಸನ್ಮಾನಿಸಲು ಕನ್ನಡ ಫಿಲಂ ಚೇಂಬರ್ಸ್ ಕಮಿಟಿಯಿಂದ ಆಹ್ವಾನಿಸಲಾಗಿದೆ.
ಇಡೀ ರಾಜ್ಯಮಟ್ಟದಲ್ಲಿ ತನ್ನದೇ ಆದ ಹೊಸ ಹೊಸ ಯೋಜನೆಗಳ ಮುಖಾಂತರ ಯುವ ಜನರಿಗೆ ಸ್ಪೂರ್ತಿದಾಯಕ ಕೆಲಸಗಳೊಂದಿಗೆ ತನ್ನದೇ ಆದ ವಿಶಿಷ್ಟ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ) ಇವರ ಮಾದರಿಯುತವಾದ ರಕ್ತದಾನ, ಸ್ವಚ್ಛಾಲಯ, ಸರಕಾರಿ ಶಾಲೆ, ಉಳಿಸಿ ಬೆಳೆಸಿ, ಸ್ವಚ್ಛತಾ ಕಾರ್ಯಕ್ರಮ, ಶೈಕ್ಷಣಿಕ ಕ್ರೀಡೆ ಶಿಕ್ಷಣ ಹಾಗೂ ಹಲವಾರು ಕಾರ್ಯಕ್ರಮಗಳೊಂದಿಗೆ ರಾಜ್ಯದ ಜನತೆಯ ಸೇವೆಗಾಗಿ ಮುಡಿಪಾಗಿಟ್ಟಿರುವಂತಹ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಫಿಲಂ ಚೇಂಬರ್ ಸಮಿತಿಯ ರಾಜ್ಯಾಧ್ಯಕ್ಷ ಎಂ. ಎಸ್. ರವೀಂದ್ರ ಅವರು ತಿಳಿಸಿದ್ದಾರೆ.