ಬೆಳಾಲು ಪ್ರೌಢಶಾಲೆಯಲ್ಲಿ ಅಭಿನಂದನಾ ಸಮಾರಂಭ

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಉತ್ತಮ ಗುಣಮಟ್ಟದ ಫಲಿತಾಂಶ (ಶೇಕಡ 97, ಎ ಗ್ರೇಡ್)ತಂದುಕೊಟ್ಟ ಪಾಸು ಫೈಲು ಭೇದಭಾವ ಮಾಡದೆ, ಶಾಲೆಯ ಮೂಲಕ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳನ್ನು, ಸಮಾನವಾಗಿ ವೇದಿಕೆಗೆ ಕರೆದು ಸ್ಮರಣಿಕೆಯೊಂದಿಕೆ, ಗೌರವ ಸಲ್ಲಿಸಲಾಯಿತು.

ಒಂದು ಶಾಲೆಯ ಶೈಕ್ಷಣಿಕ ಯಶಸ್ಸಿನಲ್ಲಿ ಉನ್ನತ ಸ್ತರದವರ ಸಾಧನೆಯು ಮಾತ್ರ ಸನ್ಮಾನಿಸಲ್ಪಡುತ್ತದೆ. ಹಲವರ ಶ್ರಮದ ಎದುರಲ್ಲಿ ಕೆಲವರಿಗೆ ಮಾತ್ರ ಮಾಡುವ ಸನ್ಮಾನ ಮೌಲಿಕವಾಗಿರಲು ಸಾಧ್ಯವಿಲ್ಲವೆಂಬ ನೆಲೆಯಲ್ಲಿ ಬೆಳಾಲು ಪ್ರೌಢಶಾಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.


ಆಗಮಿಸಿದ ಎಲ್ಲ ಅತಿಥಿಗಳು ಇದೊಂದು ಮಾದರಿ ಅಭಿನಂದನಾ ಸಮಾರಂಭ ಎಂದು ಅಭಿಪ್ರಾಯಪಟ್ಟರು.ಅಭಿನಂದನೆ ಸ್ವೀಕರಿಸಿದ ಹಲವು ಹಳೆವಿದ್ಯಾರ್ಥಿಗಳು ಶಾಲಾದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಗೌಡರವರು ವಹಿಸಿದ್ದರು.ಅತಿಥಿಗಳಾಗಿ ಪೋಷಕ ಸಮಿತಿ ಸದಸ್ಯರಾದ ಸುಲೈಮಾನ್ ಭೀಮಂಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಭಾಗವಹಿಸಿದ್ದರು.

ಎಲ್ಲ ಶಿಕ್ಷಕ, ಸಿಬ್ಬಂದಿಗಳು ಉಪಸ್ಥಿತರಿದ್ದರು.ಹಿರಿಯ ಶಿಕ್ಷಕಿ ವಾರಿಜ.ಎಸ್ ಗೌಡರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಆಯೋಜಿಸಲ್ಲಟ್ಟಿತು.ಸಭೆಯ ಎಲ್ಲ ಕಾರ್ಯಕಲಾಪಗಳು ವಿದ್ಯಾರ್ಥಿಗಳಿಂದ ನಿರ್ವಹಿಸಲ್ಪಟ್ಟಿತು.

LEAVE A REPLY

Please enter your comment!
Please enter your name here