


ಬಂದಾರು: ಇತ್ತೀಚೆಗೆ ಹೃದಯಘಾತದಿಂದ ಮೃತರಾದ ಪೆರ್ಲ- ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಮೊಕ್ತೇಸರ ಕೋಡಿಮಜಲು ನಿವಾಸಿ ಕುಕ್ಕಪ್ಪ ಗೌಡರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹಾಬಲ ಗೌಡ, ಪದ್ಮುಂಜ ಸಿಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಯುವಮೋರ್ಚಾ ಮಂಡಲಾಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪದ್ಮುಂಜ ಸಿಎ ಬ್ಯಾಂಕ್ ನಿರ್ದೇಶಕ ಡೀಕಯ್ಯ ಗೌಡ ಕoಚರೊಟ್ಟು, ಪೆರ್ಲ -ಬೈಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಗೌಡ ಅಂಗಡಿಮಜಲು, ಪ್ರಮುಖರಾದ ಹೊನ್ನಪ್ಪ ಗೌಡ ಸೋಣಕುಮೇರು, ದಿನೇಶ್ ಗೌಡ ಅಡ್ಡಾರು, ಲೋಕ್ಷತ್ ಗೌಡ ಅನಿಲ, ಬಂದಾರು ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.









