ಉಜಿರೆ: ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ (ರಿ ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಎ.30 ರಂದು ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಉದ್ಘಾಟಿಸಿದರು.ರೋಟರಿ ಅಧ್ಯಕ್ಷೆ ಮನೋರಮಾ ಭಟ್, ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ,ನಿವೃತ್ತ ಸೈನಿಕ ಶ್ರೀಕೃಷ್ಣ ಭಟ್, ಸೇವಾಭಾರತಿ ಕೋಶಾಧಿಕಾರಿ ವಿನಾಯಕ ರಾವ್ ಕನ್ಯಾಡಿ, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ., ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಉಜಿರೆ ವರ್ತಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ ಗೌಡ, ಪ್ರಗತಿ ಮಹಿಳ ಮಂಡಳಿ ಅಧ್ಯಕ್ಷೆ ಜಯಶ್ರೀ ಪ್ರಕಾಶ್, ಸೇವಾಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ, ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಘ್ನೇಷ್, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ರಾಘವೇಂದ್ರ ಮತ್ತು ತಂಡ ರಕ್ತ ತಪಾಸಣೆಗೆ ನೆರವಾದರು.ವಿನಾಯಕ ರಾವ್ ರಕ್ತದಾನದ ಮಹತ್ವ ತಿಳಿಸಿದರು.ಎಸ್ .ಜಿ.ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ , ಶ್ರೀಧರ ಕೆ.ವಿ.ವಂದಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು 136 ಯೂನಿಟ್ ರಕ್ತ ಸಂಗ್ರಹಿಸಲಾಯಿತು.ಉಜಿರೆಯ ಶ್ರೀ ಶಾರದಾ ಸೇವಾ ಟ್ರಸ್ಟ್,ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ, ಬೆಳ್ತಂಗಡಿ ರೋಟರಿ ಕ್ಲಬ್, ಎಸ್ .ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹವ್ಯಕ ವಲಯ ಉಜಿರೆ, ಉಜಿರೆ ವಲಯ ಬಂಟರ ಸಂಘ, ಸಿಂಧು ಎಲೆಕ್ಟ್ರಿಕಲ್ಸ್, ರಿಕ್ಷಾ ಚಾಲಕ,ಮಾಲಕರ ಸಂಘ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ,ಮಂಜುಶ್ರೀ ಪ್ರಿಂಟರ್ಸ್, ಹಿಂದೂ ಜಾಗರಣ ವೇದಿಕೆ, ಬೆನಕ ಹೆಲ್ತ್ ಸೆಂಟರ್,ಪ್ರಗತಿ ಮಹಿಳಾ ಮಂಡಳಿ ಮತ್ತು ಪಾರ ಫ್ರೆಂಡ್ಸ್,ಅತ್ತಾಜೆ ಮೊದಲಾದ ಸಂಘಟನೆಗಳು ಶಿಬಿರಕ್ಕೆ ಸಹಕರಿಸಿದ್ದರು.