ಬೆಳ್ತಂಗಡಿ: ಧರ್ಮಸ್ಥಳದಿಂದ ಕಟೀಲಿಗೆ ತೆರಳುತ್ತಿದ್ದ ತುಮಕೂರು ಮೂಲದ ಕುಟುಂಬದ ಡಸ್ಟರ್ ಕಾರ್ ಹಾಗೂ ಕಣ್ಣಂಗಾರಿನಿಂದ ಗೇರುಕಟ್ಟೆ ಕಡೆ ಹೋಗುತ್ತಿದ್ದ ರಿಕ್ಷಾ ಪೆರಿಂಜೆಯ ಶಾಲಾ ಬಳಿ ಮೇ.1ರಂದು ಅಪಘಾತ ನಡೆದಿದೆ. ರಿಕ್ಷಾದಲ್ಲಿ ಸಣ್ಣ ಮಗು ಸೇರಿ 5 ಜನರಿಗೂ ಗಂಭೀರ ಗಾಯಗೊಂಡಿದ್ದು, ಹೊಸಂಗಡಿ ಪಂಚಾಯತ್ ಸದಸ್ಯ ಹರಿಪ್ರಸಾದ್, ಮತ್ತಿತ್ತರು ಗಾಯಾಳುಗಳನ್ನು ಆಳ್ವಾಸ್ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು.
ನಂತರ ಹೆಚ್ಚಿನ ಚಿಕೆತ್ಸೆಗೆ ಮಂಗಳೂರು ಆಸ್ಪತ್ರಗೆ ಕಳುಹಿಸಲಾಯಿತು.
ವೇಣೂರು ಪೊಲೀಸರು ಸ್ಥಳಕ್ಕೆ ಬಂದು ಮಹಜರು ಮಾಡಿದರು.
p>