ಕಳಿಯ: ಮನೆಯಿಂದಲೇ 17 ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಂದ ಮತದಾನ

0

ಗೇರುಕಟ್ಟೆ: ಇಲ್ಲಿಯ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ 17 ಜನ ಹಿರಿಯ ವಯೋ ಸಹಜ ಮಹಿಳೆಯರು, ಪುರುಷರು ಹಾಗೂ ವಿಕಲಚೇತನರು ಪ್ರತಿಯೊಂದು ಮನೆಯಲ್ಲಿ ಮೇ.1 ರಂದು ಮತದಾನ ನಡೆಯಿತು.
ಕಳಿಯ ಗ್ರಾಮದ ಹೀರ್ಯ ಮನೆಯ ನಿವಾಸಿ 84 ವರ್ಷದ ಲಕ್ಷ್ಮಿ ಮಾತನಾಡುತ್ತಾ ಚುನಾವಣಾ ಆಯೋಗ ಕಲ್ಪಿಸಿರುವ ಈ ರೀತಿಯ ಮತದಾನದಿಂದ ಹಿರಿಯರು ಮತ್ತು ವಿಕಲಚೇತನರು ತುಂಬಾ ಅನುಕೂಲವಾಗುವುದು ಎಂದು ಸಂತೋಷದಿಂದ ಹೇಳಿದರು.


ಈ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ಟಿ.ಬಿ.ಬಸವ ಲಿಂಗಪ್ಪ, ಪಿ.ಓ.ಪ್ರಥಮ ಮಂಜುನಾಥ್ ಹೆಚ್.ವಿ.,ದ್ವಿತೀಯ ಯಶವಂತ ರಾಯ ಬಿರದಾರ್, ಚುನಾವಣಾ ಪರೀವಿಕ್ಷಕರಾದ ಡಾ.ಕುಮಾರ್ ಸ್ವಾಮಿ, ವಿಡಿಯೋ ಗ್ರಾಫರ್ ಕೌಸಿಕ್ ಹೆಗ್ಡೆ, ಪೊಲೀಸ್ ಸಿಬ್ಬಂದಿ ಲಕ್ಷ್ಮಿ ಎಸ್.ಎಮ್., ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಎಲ್.ಓ. ಸುಜಾತ ವಿ.ಶೆಟ್ಟಿ, ರವಿ ಹೆಚ್, ಹಾಗೂ ಮನೆಯ ಯಜಮಾನ ಸದಾಶಿವ ನೈಾಕ್ ಹೀರ್ಯ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here