ಧರ್ಮಸ್ಥಳ : ಮಾಗಡಿ ತಾಲೂಕಿನ ಕುದೂರ್ ಹೋಬಳಿ ಮಾದಿಗೊಂಡನಹಳ್ಳಿ ರಾಮನಗರದ ಶ್ರೀ ಗುಡ್ಡದ ರಂಗನಾಥ ಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರು ರೂ. 10 ಲಕ್ಷ ರೂಗಳನ್ನು ಅನುದಾನವಾಗಿ ನೀಡಿದರು.
ಸುಮಾರು 600 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ದೇವಸ್ಥಾನದ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಶ್ರೀ ರಾಮಸ್ವಾಮಿ ಎಂ ಆರ್ ಗುರುಪೀಠದ ಅಧ್ಯಕ್ಷರು ಹಾಗೂ ಟ್ರಸ್ಟ್ ನ ಸಂಚಾಲಕರು ಇವರ ನೇತೃತ್ವದಲ್ಲಿ ಟ್ರಸ್ಟ್ ನ ಧರ್ಮದರ್ಶಿಗಳು ಹಾಗೂ ಭಕ್ತ ಸಮೂಹ ಕೈಗೆತ್ತಿಕೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತನ ಟ್ರಸ್ಟ್ (ರಿ). ಧರ್ಮಸ್ಥಳ ಕ್ಷೇತ್ರದ ವತಿಯಿಂದ ಅನುದಾನವನ್ನು ಯೋಜನೆ ಪ್ರಾದೇಶಿಕ ಮೈಸೂರು ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ, ರಾಮನಗರ ನಿರ್ದೇಶಕ ಶ್ರೀ ಜಯಕರ ಶೆಟ್ಟಿ, ಮಾಗಡಿ ಯೋಜನಾಧಿಕಾರಿ ನೇತೃತ್ವದಲ್ಲಿ ಹಾಗೂ ಶಾಸಕ ಏ. ಮಂಜು ಅವರ ಉಪಸ್ಥಿತಿಯಲ್ಲಿ ದೇವಸ್ಥಾನದ ಪದಾಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ರಂಗಸ್ವಾಮಯ್ಯ, ಕಾರ್ಯದರ್ಶಿ ಶ್ರೀ ಚಂದ್ರಯ್ಯ, ಜಂಟಿ ಕಾರ್ಯದರ್ಶಿ ಶಿವಪ್ರಕಾಶ್ ಆರ್, ಖಜಾಂಚಿ ಶ್ರೀ ಶಿವಶಂಕರ್, ಧರ್ಮದರ್ಶಿಗಳಾದ ದೇವರಾಜ್, ಮಂಜುನಾಥ್ ಎಲ್.ಜಿ, ಶ್ರೀ ರಂಗ ಸ್ವಾಮಯ್ಯ, ಶಿವಲಿಂಗಯ್ಯ, ತಿರುಮಲೇಶ್, ವಿವಿಧ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.