ಮರೋಡಿ: ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ 7 ವರ್ಷಗಳ ಹಿಂದೆ ಪ್ರಾರಂಭಗೊಂಡ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಸಾಧಿಸಬಲ್ಲರು ಎಂಬುವುದಕ್ಕೆ ಮರೋಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವೇ ಸಾಕ್ಷಿ. ದಿನಾಂಕ 1.9.2014 ರಂದು 53 ಲೀಟರ್ ಹಾಲಿನೊಂದಿಗೆ ಸ್ಥಾಪನೆಯಾದ ಹಾಲು ಉತ್ಪಾದಕರ ಸಹಕಾರಿ ಸಂಘವು ಪ್ರಸ್ತುತ 178 ಸದಸ್ಯರನ್ನೊಳಗೊಂಡು ದಿನಕ್ಕೆ 650 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅತ್ಯಂತ ಅಲ್ಪ ಅವಧಿಯಲ್ಲಿಯೇ ಸಂಘವು ಲಾಭದತ್ತ ಮುನ್ನಡೆಯುತ್ತಿದ್ದು ಇದರ ಸ್ವಂತ ನಿವೇಶನ ಖರೀದಿಸಿ ನೂತನ ಸುಸಜ್ಜಿತವಾದ ಕಟ್ಟಡ ತಲೆ ಎತ್ತಿ ನಿಂತಿದ್ದು ಇದರ ನೂತನ ಕಟ್ಟಡ ಉದ್ಘಾಟನೆಯು ಇಂದು ಜ.11 ರಂದು ಉದ್ಘಾಟನೆಗೊಂಡಿದೆ.
ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಸಭಾಭವನದ ಉದ್ಘಾಟನೆಯನ್ನು ದ.ಕ.ಹಾಲು ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ನೆರವೇರಿಸಿದರು. ದ.ಕ.ಹಾಲು ಒಕ್ಕೂಟ ಉಪಾಧ್ಯಕ್ಷ ಜಯರಾಮ್ ರೈ ಕಛೇರಿಯನ್ನು ಹಾಗೂ ದ.ಕ.ಹಾಲು ಒಕ್ಕೂಟ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ನಾಮಫಲಕ ಉದ್ಘಾಟನೆಯನ್ನು ನೆರವೇರಿಸಿದರು. ದ.ಕ.ಹಾಲು ಒಕ್ಕೂಟ ನಿರ್ದೇಶಕ ನಿರಂಜನ ಬಾವಂತಬೆಟ್ಟು ಪಶು ಆಹಾರ ಗೋದಾಮು ಉದ್ಘಾಟನೆ ಮಾಡಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನೇರವೇರಿಸಿದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ವಿವ್ಜಿನ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಶ್ರೀ ಜೈನ್ ಮೊದಲಾದವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ , ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ ರಾವ್, ಉಪವ್ಯವಸ್ಥಾಪಕ ಡಾ| ಚಂದ್ರಶೇಖರ್ ಭಟ್ ,ಎಸ್.ಕೆ.ಡಿ.ಆರ್.ಡಿ.ಪಿ ನಿರ್ದೇಶಕ ಸತೀಶ್ ಶೆಟ್ಟಿ., ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷೀತ್ ಶಿವರಾಂ, ಜಯರಾಜ್ ಕಾಬಯ, ಡಾ| ಪೂಜಾ, ಶ್ರೀಮತಿ ಸುಚಿತ್ರಾ, ಹಾಗೂ ಪ್ರಸ್ತುತ ಅಧ್ಯಕ್ಷ ಎವುಜಿನ ಪಿರೇರಾ, ಉಪಾಧ್ಯಕ್ಷ ಶಶಿಕಲಾ, ನಿರ್ದೇಶಕರುಗಳಾಗಿ ಶ್ರೀಮತಿ ವನಿತಾ, ಶ್ರೀಮತಿ ಶಶಿಕಲಾ, ಶ್ರೀಮತಿ ಅನಿತಾ ಪಿರೇರಾ, ಶ್ರೀಮತಿ ಬೇಬಿ, ಶ್ರೀಮತಿ ಶಶಿಕಲಾ.ಆರ್., ಶ್ರೀಮತಿ ಚಂದ್ರಾವತಿ, ಶ್ರೀಮತಿ ಗ್ರೇಸ್ಸಿ ಪಿರೇರಾ, ಶ್ರೀಮತಿ ಹೇಮಾವತಿ, ಶ್ರೀಮತಿ ರಹಿಯಾನ, ಕಾರ್ಯದರ್ಶಿಯಾಗಿ ಮಲ್ಲಿಕಾ, ಸಿಬ್ಬಂದಿ ಸರೋಜಿನಿಯವರು ಮೊದಲಾದವರು ಉಪಸ್ಥಿತರಿದ್ದರು.