ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿಯ 48ನೇ ವರ್ಷದ ದೀಪೋತ್ಸವವು ಜ. 7ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಾಮನಗರದಲ್ಲಿ ನಡೆಯಿತು.
ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವವನ್ನು ಬೆಂಗಳೂರಿನ ಉದ್ಯಮಿ ಶ್ರೀ ನಾಗನಾಥೇಶ್ವರ ದೇವಸ್ಥಾನ ಬೇಗೂರು ಇದರ ಅಧ್ಯಕ್ಷ ಎಂ ನಾರಾಯಣ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಂಕರ್ ಹೆಗ್ಡೆ, ಗುರುಸ್ವಾಮಿ ಪ್ರಕಾಶ್, ಅಧ್ಯಕ್ಷರು ಶರತ್ ರಾಜ್., ಜೊತೆ ಕಾರ್ಯದರ್ಶಿ ಪಾಂಡುರಂಗ, ಟ್ರಸ್ಟಿನ ಸದಸ್ಯರಾದ ಅಶೋಕ್ ಕುಮಾರ್, ದಿನೇಶ್ ಸೋಣಂದೂರು. ದಿನೇಶ್ ಮಂಗಳಾದೇವಿ., ಪ್ರಸನ್ನ ಆಚಾರ್ಯ, ಕೃಷ್ಣಕುಮಾರ್, ರಮೇಶ್ ಆಚಾರ್ಯ, ಹರಿಶ್ಚಂದ್ರ ಶೆಟ್ಟಿ, ದೀಪೋತ್ಸವ ಸಮಿತಿಯ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಕಾರ್ಯದರ್ಶಿ ಜಯರಾಮ್ ಆಚಾರ್ಯ. ಮಹಾ ಪೋಷಕರಾದ ನಾರಾಯಣರಾವ್ ಮುಗಳಿ. ಅರ್ಚಕರಾದ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.
ಬೆಳಿಗ್ಗೆ ಗಣ ಹೋಮ ಮತ್ತು ಶ್ರೀ ಮಹಾಗಣಪತಿ ದೇವರಿಗೆ ಅಥರ್ವಶೀರ್ಷಾಭಿಷೇಕ ಶಾಸ್ತಾರ ಕದಳಿ ಯಾಗ ಶ್ರೀ ಅಯ್ಯಪ್ಪ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ , ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ವತಿಯಿಂದ ಮತ್ತು ದೀಪಾ ಆರಾಧನೆ ನಡೆಯಿತು. ರಾತ್ರಿ ಶ್ರೀ ಗಣಪತಿ ದೇವರಿಗೆ ಮೂಡಪ್ಪ ಸೇವೆ ಶ್ರೀಶಾಸ್ತಾರ ದೇವರ ಸನ್ನಿಧಾನದಲ್ಲಿ ರಂಗಪೂಜೆ ಶ್ರೀ ಶನೇಶ್ವರ ದೇವರಿಗೆ ಸತ್ಯದೇವತೆಗೆ ತಂಬಿಲಸೇವೆ. ಮಂತ್ರಾಕ್ಷತೆ ನಡೆಯಿತು. ರಾತ್ರಿ ಅಗ್ನಿಸೇವೆ, ಮಹಾಪೂಜೆ ಪ್ರಸಾದ ವಿತರಣೆ.
ಮತ್ತು ಸತ್ಯದೇವತೆ ನೇಮೋತ್ಸವ ಜರಗಿತು.