ಬೆಳ್ತಂಗಡಿ: ಭಾರತೀಯ ಮಜ್ಧೂರು ಸಂಘದಿಂದ ಕಾರ್ಮಿಕರ ವಿವಿಧ ಬೇಡಿಕೆಗಳು ಈಡೇರಿಕೆಗೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ

0

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ವಲಯದಲ್ಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕು ತಹಸಿಲ್ದಾರರ ಮೂಲಕ ಮನವಿ ಸಲ್ಲಿಸಿ ಕಾರ್ಮಿಕರ ಬೇಡಿಕೆಗಳನ್ನು ಶೀಘ್ರವೇ ನೆರವೇರಿಸುವ ದೃಷ್ಟಿಯಲ್ಲಿ ಕ್ರಮ ವಹಿಸಬೇಕೆಂದು ಕೋರಿಕೊಳ್ಳಲಾಯಿತು.

ಪ್ರಮುಖವಾಗಿ ರಿಕ್ಷಾ ಚಾಲಕರಿಗೆ ಅಸಂಘಟಿತ ಮಂಡಳಿ ರಚಿಸುವಂತೆ ಹಾಗೂ ಕಟ್ಟಡ ಕಾರ್ಮಿಕರಂತೆ ರಿಕ್ಷಾ ಚಾಲಕರಿಗೂ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಕಟ್ಟಡ ಕಾರ್ಮಿಕರ ವೈದ್ಯಕೀಯ ಚಿಕಿತ್ಸೆಯ ಸಮಸ್ಯೆಗಳನ್ನು ಸರಿಪಡಿಸುವಂತೆ, ಹಾಗೂ 2021-2022ರ ಸಾಲಿನ ಸ್ಕಾಲರ್ ಶಿಪ್ ಬರದ ಮಕ್ಕಳಿಗೆ ಶೀಘ್ರ ವಿದ್ಯಾರ್ಥಿ ವೇತನ ಪಾವತಿಸುವಂತೆ ಹಾಗೂ 2022-2023 ಸಾಲಿನ ಸ್ಕಾಲರ್ ಶಿಪ್ ಅರ್ಜಿ ಶೀಘ್ರವಾಗಿ ಆರಂಭಿಸುವಂತೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಗುತ್ತಿಗೆ ಆಧಾರ ಕೈ ಬಿಟ್ಟು ನೇರ ನೇಮಕಾತಿ ‌ಮಾಡುವಂತೆ ಹಾಗೂ ಹಾಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ, ಅಂಗನವಾಡಿ ,ಅಶಾಕಾರ್ಯಕರ್ತರು ,ಬಿಸಿಯೂಟ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಹಾಗೂ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರಿಗೆ ಮಂಡಳಿ ರಚಿಸಿ ಕಟ್ಟಡ ಮಂಡಳಿಯಂತೆ ಸೌಲಭ್ಯಗಳನ್ನು ‌ನೀಡುವಂತೆ ಮನವಿ ಸಲ್ಲಿಸಲಾಯಿತು,
ಈ ಸಂಧರ್ಭದಲ್ಲಿ ಇತ್ತೀಚೆಗೆ ವಿದ್ಯುತ್ ಅಪಘಾತದಿಂದ ಮೃತರಾದ ಭಾರತೀಯ ಮಜ್ದೂರ್ ಸಂಘದ ಸದಸ್ಯ ಪ್ರಶಾಂತ ಆಚಾರ್ಯ ಅವರ‌ ಪತ್ನಿಗೆ ಸಂಘದ ವತಿಯಿಂದ ಸಹಾಯಹಸ್ತ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ತಾಲೂಕ ಅಧ್ಯಕ್ಷ ಉದಯ್ ಬಿ.ಕೆ, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಸಾಂತಪ್ಪ, ಬಿಎಂಎಸ್ ಕಟ್ಟಡ ಕಾರ್ಮಿಕ‌ ಮಜ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಕಲ್ಮಂಜ , ಬಿಎಂಎಸ್ ಬೆಳ್ತಂಗಡಿ ತಾಲೂಕು ಆಟೋ ಚಾಲಕ ಸಂಘದ ಅಧ್ಯಕ್ಷ ಕ್ರಷ್ಣ ಬೆಳಾಲು, ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ , ಬೀಡಿ ಮಜ್ದೂರ್ ಸಂಘದ ಸಂಚಾಲಕರಾದ ಚಂದ್ರಕಲಾ ಹಾಗೂ ಶಶಿಕಲಾ ಕೊಯ್ಯುರು, ಬಿಎಂಎಸ್ ತಾಲೂಕು ಸಮಿತಿ ಸದಸ್ಯರಾದ ವಿಜಯ್ .ಜಿ. ಉಮೇಶ್ ಕಳೆಂಜ,ಚಂದ್ರಶೇಖರ ಕೊಕ್ಕಡ,ನಂದೀಶ್ ಗೇರುಕಟ್ಟೆ,ದಿನೇಶ್ ಗೌಡ ಕಲ್ಮಂಜ,ಪ್ರವೀಣ ಗೌಡ ಕಲ್ಮಂಜ,ಯಶವಂತ ಗೌಡ ಕೊಯ್ಯುರು, ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here