ಬೆಳ್ತಂಗಡಿ: ನಾವೂರಿನಲ್ಲಿ ನ. 1 ರಂದು ಬೃಹತ್ ರಕ್ತದಾನ ಶಿಬಿರ — ಪೂರ್ವ ತಯಾರಿ ಸಭೆ ​

0

ಬೆಳ್ತಂಗಡಿ: ಸರ್ವೋದಯ ಟ್ರಸ್ಟ್ ನಾವೂರು, ಆಯುಷ್ ಫೆಡರೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ, ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ ಬೆಳ್ತಂಗಡಿ, ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬಂಗಾಡಿ ಹಾಗೂ ರಕ್ತ ನಿಧಿ ಕೇಂದ್ರ ಕೆಎಂಸಿ ಆಸ್ಪತ್ರೆ ಮಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ (ನವೆಂಬರ್ 1) ಬೆಳಿಗ್ಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.​

ನಾವೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ರಕ್ತದಾನ ಶಿಬಿರ ನಡೆಯಲಿದ್ದು, ಇದರ ಪೂರ್ವಭಾವಿ ತಯಾರಿ ಸಭೆಯು ಅಕ್ಟೋಬರ್ 25ರಂದು ಸಂಜೆ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿತು.​ಸಭೆಯಲ್ಲಿ ನಾವೂರು ಆರೋಗ್ಯ ಕ್ಲಿನಿಕ್‌ನ ಡಾ. ಪ್ರದೀಪ್ ಆಟಿಕುಕ್ಕೆ ಅವರು ರಕ್ತದಾನ ಶಿಬಿರದ ರೂಪುರೇಷೆ ಹಾಗೂ ಸಂಘಟನಾತ್ಮಕ ಮಾಹಿತಿಯನ್ನು ನೀಡಿದರು.​

ಈ ಸಂದರ್ಭದಲ್ಲಿ ಸರ್ವೋದಯ ಟ್ರಸ್ಟ್‌ನ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.​ಸಭೆಯಲ್ಲಿ ಬೆಳ್ತಂಗಡಿಯ ಪ್ರಮುಖ ನ್ಯಾಯವಾದಿಗಳಾದ ಸೇವಿಯರ್ ಪಾಲೇಲಿ ನಾವೂರು, ಜಯಂತಗೌಡ ಗುರಿಪಳ್ಳ, ಶ್ಯಾಮಸುಂದರಗೌಡ ನಡ, ಪ್ರವೀಣ್ ವಿ. ಜಿ. ಕನ್ಯಾಡಿ, ಗಣೇಶ್ ಕನಾಲು, ಎ. ಕೆ. ಅಬ್ಬಾಸ್, ಜನಾರ್ಧನಗೌಡ ಕಡ್ತ್ಯಾರು, ಪೂವಪ್ಪಗೌಡ ನಾವೂರು, ಮುನಿರಾಜ ಅಜ್ರಿ ನಡ, ಅಜಿತ್ ಆರಿಗ ನಡ, ರಾಮಣ್ಣ ಕುಂಬಾರ ಕುಕ್ಕಾವು, ಸ್ವರೂಪ್ ನಾವೂರು, ಇನಾಸ್ ಕನ್ಯಾಡಿ, ನವಭಾರತ್ ಗೆಳೆಯರ ಬಳಗ ಇಂದಬೆಟ್ಟು ಇದರ ಸದಸ್ಯರು ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು.​

ಮೋಹನ್ ಬಂಗೇರ ಹಾಗೂ ಧರ್ಣಪ್ಪ ಮೂಲ್ಯ ಅವರು ಕಾರ್ಯಕ್ರಮದ ನಿರ್ವಹಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here