






ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಹಳೆಕೋಟಿ, ಬೆಳ್ತಂಗಡಿ, ವಾಣಿ ಸಹಕಾರ್ಯ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ತಂಗಡಿ ಹಾಗೂ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇವರ ಸಹಯೋಗದಲ್ಲಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ಮುಂಬರುವ ನವೆಂಬರ್ 22, 2026 ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕು ಮಟ್ಟದ ‘ಗೌಡರೆ ಗಾಜಿ ಗಮ್ಮತ್ತು’ ತುಳು ಸಾಂಸ್ಕೃತಿಕ ಪರ್ವ-2026 ಕಾರ್ಯಕ್ರಮದ ಪೂರ್ವಭಾವಿಯಾಗಿ ನಾವೂರು ಗ್ರಾಮ ಸಮಿತಿ ಸಭೆಯು ಅತ್ಯಂತ ಉತ್ಸಾಹದಿಂದ ಜರುಗಿತು.
ಈ ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಪುವಪ್ಪ ಗೌಡ ಪುಂಕೇತ್ಯಾರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯುವವೇದಿಕೆ ನಿರ್ದೇಶಕರು ಹಾಗೂ ಗೌರವ ಸಲಹೆಗಾರರಾದ ನವೀನ್ ಬಿ.ಕೆ. ಮತ್ತು ಯುವವೇದಿಕೆ ಸಂಘಟನ ಕಾರ್ಯದರ್ಶಿ ಪ್ರದೀಪ್ ಗೌಡ ನಾಗಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.ಗ್ರಾಮ ಸಮಿತಿ ಕಾರ್ಯದರ್ಶಿ ದಿನೇಶ್ ಗೌಡ ಹಾಗೂ ಗಣೇಶ್ ಗೌಡ ಸಭೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.


ಕಾರ್ಯಕ್ರಮ ದ ಸ್ವಾಗತ ಹಾಗೂ ಧನ್ಯವಾದವನ್ನು ಸುಧಾ ದಿನೇಶ್ ನೀಡಿದ್ದರು ಸಭೆಯಲ್ಲಿ ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸುಮಾರು 70 ಕ್ಕೂ ಅಧಿಕ ಸ್ವಜಾತಿ ಬಾಂದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ತಮ್ಮ ಬೆಂಬಲವನ್ನು ಸೂಚಿಸಿದರು.
ಕಾರ್ಯಕ್ರಮದ ವಿಶೇಷತೆಗಳು:ಹಳೆಕೋಟೆಯ ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಈ ಮಹಾಸಮ್ಮೇಳನದಲ್ಲಿ ಆಕರ್ಷಕ ಪಥಸಂಚಲನ, ತುಳುನಾಡ ಸಾಂಸ್ಕೃತಿಕ ಸ್ಪರ್ಧೆಗಳು, ಹಗ್ಗಜಾಗಟ (ಪುರುಷ ಮತ್ತು ಮಹಿಳಾ ವಿಭಾಗ), ವೋಲಿಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ನಿವೃತ್ತ ಶಿಕ್ಷಕರು, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷ ಸಾಧನೆಗೈದ ಸಮಾಜ ಬಂಧುಗಳಿಗೆ ಸನ್ಮಾನ ಸಮಾರಂಭವು ಜರುಗಲಿದೆ.
ಕಳೆದ ಬಾರಿ ನಡೆದ ‘ಕೇಸರ್ ಕೊಂಡೋಡು ಗೌಡರೆ ಗಾಜಿ-ಗಮ್ಮತ್’ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಾ, ಈ ಬಾರಿಯ ಕಾರ್ಯಕ್ರಮಕ್ಕೂ ತನು-ಮನ-ಧನದಿಂದ ಸಹಕರಿಸುವಂತೆ ಸಭೆಯಲ್ಲಿ ವಿನಂತಿಸಲಾಯಿತು.









