








ಮಿತ್ತಬಾಗಿಲು: ಮಿತ್ತಬಾಗಿಲು ನಿವಾಸಿ ವ್ಯಾಪಾರಿಯಾಗಿದ್ದ ವೆಂಕಟೇಶ ಗೌಡ (66ವ) ಅವರು ಅಸೌಖ್ಯದಿಂದ ಬಳಲಿ ಅ.17ರಂದು ನಿಧನರಾದರು. ಲೈನ್ಸೇಲ್ ವ್ಯಾಪಾರ ಮಾಡುತ್ತಿದ್ದ ವೆಂಕಟೇಶ ಗೌಡ ಅವರು ಎಸ್.ಎಲ್.ವಿ ಗೌಡ್ರು ಎಂದೇ ಊರಿನಲ್ಲಿ ಜನಪ್ರಿಯತೆಯನ್ನು ಗಳಿಸಿದ್ದರು. ಸರಳ ಹಾಗೂ ಶಾಂತ ಸ್ವಭಾವದವರಾದ ಇವರು ದೈವಭಕ್ತರಾಗಿ, ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಬಾಲಕ್ಕ ಅವರನ್ನು ಅಗಲಿದ್ದಾರೆ.









