






ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಕೆಲ್ಲಗುತ್ತುವಿನವರಾಗಿದ್ದು ಪ್ರಸ್ತುತ ಉಡುಪಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿರುವ ಬಿ. ವಿಜಯ ಕುಮಾರ್ರವರು ಅ.18ರಂದು ಮೈಸೂರು ದಸರಾ ಸಾಂಸ್ಕೃತಿಕ ಸಿರಿ ಉತ್ಸವದ ವತಿಯಿಂದ ಕೊಡಮಾಡಲ್ಪಟ್ಟ ಶ್ರೀ ಚಾಮುಂಡೇಶ್ವರಿ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.



ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ಭಕ್ತಿ-ಭಾವ, ದಾನ-ಧರ್ಮ, ಕಲೆ, ಕ್ರೀಡೆ, ಸಮಾಜ ಸೇವೆ, ಯುವ ಜನ ಸೇವಾ ಮನೋಭಾವ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವಾರು ಸೇವಾ ಕಾರ್ಯವನ್ನು ಗುರುತಿಸಿ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.









