






ಮುಂಡೂರು: ನಾಗಾಂಬಿಕಾ ದೇವಸ್ಥಾನ ಮತ್ತು ಶ್ರೀ ನಾಗ ಕಲ್ಲುರ್ಟಿ ದೈವಸ್ಥಾನದಲ್ಲಿ ಅ. 11ರಿಂದ ತೆನೆ ಪೂಜೆಯೊಂದಿಗೆ ಪ್ರಾರಂಭಗೊಂಡು ಪ್ರಾರಂಭ ಅ. 19ರ ವರೆಗೆ ಶ್ರೀಕ್ಷೇತ್ರ ಮಂಗಳಗಿರಿ ಶ್ರೀ ದೇವಿ ನಾಗಾಂಬಿಕಾ ಅವ್ಮನವರ ಸನ್ನಿಧಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆಡಳಿತ ಮೋಕ್ತೆಸರ ರಾಜೀವ ಇವರ ನೇತೃತ್ವದಲ್ಲಿ ನಡೆಯಿತು.


ಪ್ರತಿ ದಿನ ಬೆಳಿಗ್ಗೆ ಮಹಾ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ ಪ್ರಸಾದವಿತರಣೆ, ಅನ್ನ ಸಂತರ್ಪಣೆ, ರಾತ್ರಿ 7-00ಕ್ಕೆ ವಿವಿಧ ಭಜನಾ ಮಂಡಳಿಗಳಾದ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತೆಂಕಕಾರಂದೂರು, ಭಜೋರೇ ಮಾರುತಿ ಕುಣಿತಾ ಭಜನಾ ತರಬೇತಿ ದಾರರ ತಂಡ ಬೆಳ್ತಂಗಡಿ, ಶ್ರೀ ಫಲ್ಗುನಿ ಭಜನಾ ತಂಡ ಸವಣಾಲು, ಶ್ರೀ ಜಗದೀಶ್ವರ ಭಜನಾ ಮಂಡಳಿ ಪೆರ್ಮುಡ, ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕುದ್ರಡ್ಕ, ಪಂಚಶ್ರೀ ಭಜನಾ ಮಂಡಳಿ ನಿಟ್ಟಡ್ಕ, ಶ್ರೀ ರಾಮಾಂಜನನೇಯ ಭಜನಾ ಮಂಡಳಿ ಮಾಲಾಡಿ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ನಾಲ್ಕೂರು, ಶ್ರೀ ಸದಾಶಿವ ಭಜನಾ ಮಂಡಳಿ ಮಲ್ಲಿಪ್ಪಾಡಿ ಮೊದಲಾದ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಅ. 19ರಂದು ಬೆಳಿಗ್ಗೆ ಮಹಾಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ರಾತ್ರಿ ಕಾರ್ಯಕ್ರಮ, ಆಯುಧ ಪೂಜೆ, 9 ಜನ ಮುತ್ತೈದೆಯರಿಗೆ ಬಾಗಿನ ಸಮರ್ಪಣೆ, ರಂಗಪೂಜೆ ಜರಗಿತು.ಆಡಳಿತ ಮೋಕ್ತೆಸರ ರಾಜೀವ, ಬಬಿತಾ, ತೃಪ್ತಿ ರಂಜಿತ್, ಸ್ತುತಿ ರಾಜೇಶ್, ಶ್ರೀ ನಾಗಾಂಬಿಕ ಭಜನಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು..









