ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ ಗೆ ಕಿಡಿಗೇಳಿಗಳಿಂದ ಬೆಂಕಿ-ವಿ.ಹಿಂ.ಪ ಬಜರಂಗದಳ‌ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ ಖಂಡನೆ

0

ಉಜಿರೆ: ಮೊನ್ನೆ ರಾತ್ರಿ ಸಂಭವಿಸಿದ ದುರಂತದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ತೀವ್ರ ಆಘಾತವಾಗಿದೆ. ನಮ್ಮ ನಾವೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಹೆಸರನ್ನು ಇಡೀ ರಾಷ್ಟ್ರಮಟ್ಟದಲ್ಲಿ ಹೆಮ್ಮೆಯಿಂದ ಗುರುತಿಸುವಂತೆ ಮಾಡಿದ ಮಹಾನ್ ಚೇತನ, ಡಾ. ಪ್ರದೀಪ್ ಅವರ ಕಾರ್ಯಕ್ಷೇತ್ರಕ್ಕೆ ಈ ರೀತಿಯಾಗಿ ಹಾನಿ ಉಂಟಾಗಿರುವುದು ಅತ್ಯಂತ ಖಂಡನೀಯ.

ನಮ್ಮ ಮುಗ್ಧ ಮಕ್ಕಳಿಗೆ ಸಂಸ್ಕಾರದ ಹಾದಿ ತೋರಿಸಿ, ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಪಠನವನ್ನು ಕಲಿಸಿ, ಪ್ರತಿಯೊಂದು ಮನೆಯಲ್ಲೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಿದ ಅವರ ನಿಸ್ವಾರ್ಥ ಸೇವೆ ಅನನ್ಯವಾದದ್ದು.

ಈ ದುಷ್ಟ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಯ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತೇನೆ.

ಡಾ. ಪ್ರದೀಪ್ ‘ನೀವು ಹಚ್ಚಿದ ಸಂಸ್ಕಾರ ಮತ್ತು ಸೇವೆಯ ದೀಪವನ್ನು ಆರಿಸಲು ಯಾವ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಇಡೀ ಊರಿನ ಜನತೆ ಮತ್ತು ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕನ ಬೆಂಬಲ ಸದಾ ನಿಮ್ಮೊಂದಿಗಿದೆ. ಈ ಸಂಕಷ್ಟದಿಂದ ನೀವು ಧೈರ್ಯವಾಗಿ ಹೊರಬಂದು, ಮತ್ತೆ ಅದೇ ಆತ್ಮವಿಶ್ವಾಸದಿಂದ ನಿಮ್ಮ ಸೇವಾ ಕಾರ್ಯವನ್ನು ಮುಂದುವರಿಸಬೇಕಾಗಿ ವಿನಂತಿಸುತ್ತೇನೆ”. ಸತ್ಯಕ್ಕೆ ಜಯವಾಗಲಿ, ಶೀಘ್ರವೇ ನ್ಯಾಯ ಸಿಗಲಿ!

LEAVE A REPLY

Please enter your comment!
Please enter your name here