ಗರ್ಡಡಿ ಪೇರಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ, ರಥ ನಿರ್ಮಾಣ ಪೂರ್ವಭಾವಿ ಸಭೆಸಮಿತಿ ರಚನೆ

0

ಗರ್ಡಡಿ : ಪೇರಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ 2028ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಮೊದಲು ಆಗಬೇಕಾದ ಬ್ರಹ್ಮರಥ ನಿರ್ಮಾಣ ಜೀರ್ಣೋದ್ದಾರ ಕುರಿತು ಪೂರ್ವಭಾವಿ ಸಭೆ ದೇವಸ್ಥಾನದಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜ ಸಮಿತಿಯ ಗೌರವಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿ ಮಾತನಾಡಿ ಬ್ರಹ್ಮರಥ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿ ಎಲ್ಲರೂ ಒಗ್ಗಟ್ಟಿನಲ್ಲಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಲಹೆ ನೀಡಿ ಚಂದ್ರ ಮಂಡಲ ರಥ ನಿರ್ಮಾಣದ ಎಲ್ಲಾ ವೆಚ್ಚ ತಾನು ನೀಡುವುದಾಗಿ ತಿಳಿಸಿದರು.ಆಡಳಿತ ಮೋಕ್ತೆಸರ ಹಾಗೂ ಪ್ರಧಾನ ಅರ್ಚಕ ಉದಯ ಮಂಜಿತ್ತಾಯ ಜೀರ್ಣೋದ್ದಾರ ಆಗಬೇಕಾದ ಅಭಿವೃದ್ಧಿ ಬಗ್ಗೆ ಮಾತನಾಡಿ ಎದುರಿನ ಅಂಗಣ ವಿಸ್ತಾರ ಆಗಬೇಕು ಗರ್ಭಗುಡಿಯ ಮರದ ದಳಿ ನವೀಕರಣ, ಬ್ರಹ್ಮ ರಥ ಹಾಗೂ ಚಂದ್ರಮಂಡಲ ರಥಗಳಿಗೆ ರಥಾಲಯ ನಿರ್ಮಾಣ,ದೈವ ಕೊಡಮಣಿತ್ತಾಯ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ಚಾವಡಿ ನಿರ್ಮಾಣ ಆಗಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಗಾರ್ಡಡಿ, ಪಡಂಗಡಿ, ನಾಲ್ಕೂರು, ಬಳಂಜ, ಸೋನಂದೂರು, ಕುಕ್ಕೇಡಿ, ನಿಟ್ಟಡೆ ಏಳು ಗ್ರಾಮದ ಭಕ್ತರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಬಳಿಕ ಬ್ರಹ್ಮ ರಥ ನಿರ್ಮಾಣ ಸಮಿತಿ ರಚನೆ ಮಾಡಲಾಯಿತು. ಸುರೇಶ್ ದೇವಾಡಿಗ ಲಿಂಗದೋಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here