ಜೇಸಿ ಹೇಮಾವತಿ. ಕೆ ಮುಂಡಾಜೆ ಇವರಿಗೆ ಪ್ರೇರಣಾ ಪ್ರಶಸ್ತಿ

0

ಬೆಳ್ತಂಗಡಿ : ಇತ್ತೀಚೆಗೆ ಮಂಗಳೂರಿನ ಜೆಪ್ಪು, ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಜೆಸಿಐ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಜೇಸಿ ಹೇಮಾವತಿ ಕೆ. ಮುಂಡಾಜೆ ಇವರಿಗೆ ಪ್ರೇರಣಾ ಪ್ರಶಸ್ತಿಯನ್ನು ವಲಯಾಧ್ಯಕ್ಷ ಜೆಎಫ್ಎಸ್ ಸಂತೋಷ್ ಶೆಟ್ಟಿ ನೀಡಿ ಗೌರವಿಸಿದರು.

ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಉಜಿರೆ ಸಿಟಿಯ ಮಹಿಳಾ ಜೇಸಿ ಸಂಯೋಜಕಿ ವಲಯ ತರಬೇತಿದಾರರಾದ ಹೇಮಾವತಿ ಕೆ ಇವರಿಗೆ ತರಬೇತಿ ವಿಭಾಗದಲ್ಲಿ ನೀಡಿದ ವಿವಿಧ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು, ಶಾಲಾ ಕಾಲೇಜುಗಳಿಗೆ ನಡೆಸಿದ ಯುವ ಸಬಲೀಕರಣ ತರಬೇತಿಗಳು ಹಾಗೂ ತರಬೇತಿ ವಿಭಾಗದಲ್ಲಿ ಘಟಕಕ್ಕೆ ನೀಡಿದ ಕೊಡುಗೆ ಇತ್ಯಾದಿಗಳನ್ನು ಗುರುತಿಸಿ , ವಲಯದ ತರಬೇತುದಾರರಿಗೆ ನೀಡುವ ಪ್ರತಿಷ್ಠಿತ ಪ್ರೇರಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ನಿಕಟ ಪೂರ್ವಾಧ್ಯಕ್ಷೆ ವಲಯದ ತರಬೇತಿ ವಿಭಾಗದ ಸಂಯೋಜಕಿ ಆಶಾಲತಾ ಪ್ರಶಾಂತ್, ಘಟಕ ಅಧ್ಯಕ್ಷ ಮಹಮ್ಮದ್ ಮಿರ್ಷಾದ್, ಸದಸ್ಯರಾದ ತಲ್ಹತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here