






ಬೆಳ್ತಂಗಡಿ: ಗಾಂಧಿ ಜಯಂತಿಯ ವಿಶೇಷ ದಿನದ ಅಂಗವಾಗಿ ಡಿ.ಕೆ.ಆರ್.ಡಿ.ಎಸ್. (ರಿ.) ಬೆಳ್ತಂಗಡಿ ವತಿಯಿಂದ ಅಕ್ಟೋಬರ್ 2, 2026 ರಂದು ಉದಯ ಮಹಾಸಂಘ ಗಂಡಿಬಾಗಿಲು ಸಹಯೋಗದೊಂದಿಗೆ, ನೆರಿಯ ನಿವಾಸಿ ರೇಣುಕಾ ಎಂಬವರ ಮನೆ ನಿರ್ಮಾಣ ಕಾರ್ಯಕ್ಕಾಗಿ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಊರ ಹಾಗೂ ಪರ ಊರಿನ ದಾನಿಗಳ ಉದಾರ ಸಹಕಾರದೊಂದಿಗೆ ಉದಯ ಮಹಾಸಂಘ ಗಂಡಿಬಾಗಿಲು ಇದರ ನೇತೃತ್ವದಲ್ಲಿ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಸಮಾಜಮುಖಿ ಕಾರ್ಯದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ಅರುಣೋದಯ ಮಹಾಸಂಘ ಬೆಳ್ತಂಗಡಿ, ಚೈತನ್ಯ ಮಹಾಸಂಘ ತೋಟತ್ತಾಡಿ ಹಾಗೂ ಉದಯ ಮಹಾಸಂಘ ಗಂಡಿಬಾಗಿಲಿನ ಸುಮಾರು 60ಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಆದರ್ಶ್ ಪಿ.ಎಸ್. ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದು, ಶ್ರಮದಾನದಲ್ಲಿ ತೊಡಗಿಸಿಕೊಂಡು ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿದರು.









