ಬೆಳ್ತಂಗಡಿ ವಲಯಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಿಂದ ದ್ವಿತೀಯ ‘ಉತ್ತಮ ವಲಯ’ ಪ್ರಶಸ್ತಿ​

0

ಬೆಳ್ತಂಗಡಿ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಇದರ 36ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಂಗಳೂರಿನ ಬೆಂದೂರುವೆಲ್ ಸ್ವೇಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್‌ನಲ್ಲಿ ಜರುಗಿತು.​

ಈ ಸಮಾರಂಭದಲ್ಲಿ ಒಟ್ಟು 14 ವಲಯಗಳ ಪೈಕಿ ಅತ್ಯುತ್ತಮ ವಲಯ ವಿಭಾಗದಲ್ಲಿ ಬೆಳ್ತಂಗಡಿ ವಲಯವು ದ್ವಿತೀಯ ಸ್ಥಾನ ಪಡೆದುಕೊಂಡು ಹೆಮ್ಮೆಗೆ ಪಾತ್ರವಾಯಿತು. ಜಿಲ್ಲಾ ಅಧ್ಯಕ್ಷರಾದ ನವೀನ್ ರೈ ಪಂಜಳಅವರು ಬೆಳ್ತಂಗಡಿ ವಲಯದ ಅಧ್ಯಕ್ಷರಾದ ರವಿ ಪೂಜಾರಿ ನಾರಾವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.​

ಕಾರ್ಯಕ್ರಮದಲ್ಲಿ ಎಸ್‌ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಕೋಶಾಧಿಕಾರಿ ಹೆರಿಕ್ ಡಿಸೋಜ, ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ ಸುರತ್ಕಲ್ ಹಾಗೂ ದತ್ತಾತ್ರೇಯ ಕಾರ್ಕಳ, ಜಿಲ್ಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ ಎನ್. ಬಂಟ್ವಾಳ, ಸಂಚಾಲಕರಾದ ಗೋಪಾಲ ಸುಳ್ಯ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳ್ತಂಗಡಿ ವಲಯದ ಗೌರವ ಅಧ್ಯಕ್ಷ ವಿಲ್ಸನ್ ಗೋನ್ಸಾಲಿಸ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಉಪಾಧ್ಯಕ್ಷ ಉಮೇಶ್ ಕುಲಾಲ್ ಹಾಗೂ ವಲಯದ ಗೌರವ ಸಲಹೆಗಾರರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here