ಸಮುದ್ರಕ್ಕೆ ಈಜಲು ಹೋದ ಬೆಳ್ತಂಗಡಿ ಬಾಲಕ ಶ್ರೇಯಸ್ ನೀರುಪಾಲು October 5, 2026 0 FacebookTwitterWhatsApp ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15ವರ್ಷ) ಮಂಗಳೂರು ಪಣಂಬೂರು ಸಮುದ್ರಕ್ಕೆ ಅ.4ರಂದು ಸಂಜೆ ಈಜಲು ಹೋಗಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ. ಮೃತ ಬಾಲಕನನ್ನು ರೆಂಕೆದಗುತ್ತು ನಿವಾಸಿ ಶೇಖರ್ ಕೆಂಬರ್ಜೆ ರವರ ಪುತ್ರ ಎಂದು ಗುರುತಿಸಲಾಗಿದೆ.