






ಬೆಳ್ತಂಗಡಿ : ಸುದೆಮುಗೇರು ಶೈನ್ ಫ್ರೆಂಡ್ಸ್ ಆಶ್ರಯದಲ್ಲಿ 11 ತಂಡಗಳ ವಾಲಿಬಾಲ್ ಪಂದ್ಯಾಟ ಅ.4ರಂದು ನಡೆಯಿತು. ಮಾಜಿ ಪಟ್ಟಣ ಪಂಚಾಯತ್ ಸದಸ್ಯ, ತಾಲೂಕು ಕೆಡಿಪಿ ಸದಸ್ಯ ಡಿ.ಜಗದೀಶ್ ಅವರು ಪಂದ್ಯಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.


ಉದ್ಘಾಟನಾ ವೇದಿಕೆಯಲ್ಲಿ ಶೈನ್ ಫ್ರೆಂಡ್ಸ್ ಸುದೆಮುಗೇರು ಅಧ್ಯಕ್ಷರು, ಜಾಗದ ಮಾಲಕರಾದ ಪುರಂದರ ಮತ್ತು ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಪಂದ್ಯಾಕೂಟದಲ್ಲಿ ಸ್ಟಾರ್ ಗಯ್ಸ್ ಬೆಳ್ತಂಗಡಿ ಪ್ರಥಮ ಹಾಗೂ ಸಾಯಿ ಫ್ರೆಂಡ್ಸ್ ಮುಗೇರು ಬಂದಾರು ದ್ವಿತೀಯ ಸ್ಥಾನ ಪಡೆದುಕೊಂಡರು.









