​ವೇಣೂರು: ವಿಕಸಿತ ಭಾರತ- 2047 ಭಾಷಣ ಸ್ಪರ್ಧೆ – ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಧನುಶ್ರೀ ಎಸ್ ಕುಲಾಲ್

0

​ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸೇವಾ ಸಂಕಲ್ಪ ಅಭಿಯಾನ’ದ ಪ್ರಯುಕ್ತ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ‘ವಿಕಸಿತ ಭಾರತ- 2047: ನನ್ನ ಕನಸಿನ ಭಾರತ’ ಕುರಿತಾದ ಬೆಳ್ತಂಗಡಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವೇಣೂರು ಇಲ್ಲಿಯ ವಿದ್ಯಾರ್ಥಿನಿ ಧನುಶ್ರೀ ಎಸ್ ಕುಲಾಲ್ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.​

ವಿಜೇತ ವಿದ್ಯಾರ್ಥಿನಿಯು ಪ್ರಶಸ್ತಿಯಾಗಿ ರೂ. 10,000 ನಗದು ಹಾಗೂ ಶಾಶ್ವತ ಫಲಕವನ್ನು ಪಡೆದು ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.

LEAVE A REPLY

Please enter your comment!
Please enter your name here