






“ಬೆಳ್ತಂಗಡಿ: ಬಾರ್ಯ ಗ್ರಾಮದ ಪ೦ದ೯ ಗುತ್ತು ಕೃಷ್ಣಪ್ಪ ಪೂಜಾರಿ ಹಾಗೂ ಬಾರ್ಯ ಗ್ರಾಮ ಪಂಚಾಯತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀಲಾ ದಂಪತಿಯ ಪುತ್ರ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರಕೃತಿ ಚಿಕಿತ್ಸಾ ತೃತೀಯ ವಿಭಾಗದ ವಿದ್ಯಾರ್ಥಿ uವಿಕಾಸ್ಇತ್ತೀಚೆಗೆ ಮೂಡು ಬಿದಿರೆ ಕಾಲೇಜಿನಲ್ಲಿ ನಡೆದ ಯೋಗ ದಲ್ಲಿ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ “ದಾಖಲೆಯನ್ನು ಮಾಡಿದ ಇವರನ್ನು ಅ. 4 ರಂದು ಜಾಗತಿಕ ಬಿಲ್ಲವ ಮಹಾಮಂಡಲ ಬೆಳ್ತಂಗಡಿ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಜಾಗತಿಕ ಬಿಲ್ಲವ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ಜಯಾನಂದ ಎಂ,ಗುರು ಚಾರಿಟೇಬಲ್ ಕೋಶಾಧಿಕಾರಿ ಭಾಸ್ಕರ ಅಮೀನ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ನಿರ್ದೇಶಕಿ ಉಷಾ ಶರತ್ ಬಾರ್ಯ, ಬಾರ್ಯ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಶೇಖರ ಪೂಜಾರಿ ಅನಲಿಕೆ,ಬಾರ್ಯ ತೆಕ್ಕಾರು ಬಿಲ್ಲವ ಸಂಘದ ಅಧ್ಯಕ್ಷ ದಿನೇಶ್ ಸುಣ್ಣಾಜೆ, ಪೋಷಕರಾದ ಕೃಷ್ಣಪ್ಪ ಪೂಜಾರಿ ಹಾಗೂ ಶೀಲಾ ಉಪಸ್ಥಿತರಿದ್ದರು.









