ವಲಯ ಮಟ್ಟದ ಕ್ರೀಡಾಕೂಟ:ಬೆದ್ರಬೆಟ್ಟು ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಇಂದಬೆಟ್ಟು :2026-27 ನೇ ಶೈಕ್ಷಣಿಕ ವರ್ಷದ ವಲಯ ಮಟ್ಟದ ಕ್ರೀಡಾಕೂಟವು ಅ.2 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು ಇಲ್ಲಿ ನಡೆಯಿತು. ಬೆದ್ರಬೆಟ್ಟು ಮರಿಯಾ0ಬಿಕ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಮೊಹಮ್ಮದ್ ಹರ್ಷ್ 10ನೇ ತರಗತಿ ಅಡೆ ತಡೆ ಓಟದಲ್ಲಿ ಪ್ರಥಮ ಸ್ಥಾನ, ಕ್ಷಮಿಕ 9ನೇ ತರಗತಿ ಗುಂಡೆಸೆತ ಪ್ರಥಮ ಸ್ಥಾನ, ಸಾನ್ವಿ 10 ನೇ ತರಗತಿ ಅಡೆತಡೆ ಓಟ ದ್ವಿತೀಯ ಸ್ಥಾನ, ಫಾತಿಮಾತ್ ರಾಹಿಝ 8ನೇ ತರಗತಿ ಗುಂಡೆಸೆತ ತೃತಿಯ ಸ್ಥಾನ, ಮಾನ್ವಿ 7ನೇ ತರಗತಿ 600 ಮೀ ಓಟ ತೃತೀಯ ಸ್ಥಾನ, ಮೊಹಮ್ಮದ್ ಸಫ್ವಾನ್ 10ನೇ ತರಗತಿ 100 ಮೀ ಓಟದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರನ್ನು ಶಾಲಾ ವ್ಯವಸ್ಥಾಪಕರು, ಶಾಲಾ ಮುಖ್ಯ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅಭಿನಂಧಿಸಿದ್ದಾರೆ.

LEAVE A REPLY

Please enter your comment!
Please enter your name here