ಚಂದ್ಕೂರು 6ನೇ ವರ್ಷದ ಹುಲಿ ಕುಣಿತದ ಪೋಸ್ಟರ್‌ ಬಿಡುಗಡೆ

0

ಬೆಳ್ತಂಗಡಿ, ಲಾಯಿಲ ಚಂದ್ಕೂರು ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಪ್ರತಿ ವರ್ಷ ವೈಭವದಿಂದ ಜರಗಲಿದೆ.

ಈ ಬಾರಿ ಕೆದ್ದೇಲು ಹೇಮಂತ್‌ ಇವರ ನೇತೃತ್ವದಲ್ಲಿ ನಡೆಯುವ 6ನೇ ವರ್ಷದ ಹುಲಿಕುಣಿತ ಪ್ರದರ್ಶನದ ಪೋಸ್ಟರ್‌ನ್ನು ದೇವಸ್ಥಾನದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಧನಂಜಯ ಅಜ್ರಿ ನಡಗುತ್ತು ಇವರು ಅನಾವರಣಗೊಳಿಸಿ, ಹುಲಿಕುಣಿತವನ್ನು ಆಯೋಜಿಸುವ ಹೇಮಂತ್‌ ಕುಮಾರ್‌ ಹಾಗೂ ಶಿವದುರ್ಗಾ ಟೈಗರ್ಸ್‌ ತಂಡಕ್ಕೆ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿದ ಹೇಮಂತ್‌ ರವರು ಮಾತನಾಡಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕಾರಣಿಕದಿಂದ ಈ ಕಲಾಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೆಲವರು ಹರಕೆಯ ರೂಪವಾಗಿ ಹುಲಿವೇಷ ಹಾಕುತ್ತಿದ್ದು, ದೇವಿಯನ್ನು ನಂಬಿದ ಎಲ್ಲರಿಗೂ ಒಳಿತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯೂ ಉತ್ತಮ ಸಹಕಾರ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್‌ ಶರ್ಮಾ, ಅಲೋಕ್‌ ಕುಮಾರ್‌ ಜೈನ್‌, ಚಂದ್ರಿಕಾ ಹೊಳ್ಳ ಚಂದ್ಕೂರು, ಹಾಗೂ ಶಿವದುರ್ಗಾ ಟೈಗರ್ಸ್‌ ತಂಡದ ಸದಸ್ಯರು, ಊರವರು ಉಪಸ್ಥಿತರಿದ್ದರು. ಅ.19ರಂದು ಸಂಜೆ ಊದು ಪೂಜೆ ಹಾಗೂ ಅ.20ರಂದು ಸಂಜೆ ಹುಲಿ ಕುಣಿತ ಕಲಾಸೇವೆಯು ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here