






ಬೆಳ್ತಂಗಡಿ: ಬೀಡಿ, ಕ್ಯಾಶ್ಯೂ, ಗಾರ್ಮೆಂಟ್ಸ್ ಮೊದಲಾದ ೧೯ ವಿಭಾಗಕ್ಕೂ ಕನಿಷ್ಠ ವೇತನ ನಿಗದಿ ಪಡಿಸಬೇಕು. ಗುತ್ತಿಗೆ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಿ ಅವರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಸೆ.೨೫ರಂದು ಕರ್ನಾಟಕ ರಾಜ್ಯದಾದ್ಯಂತ ಸಿಐಟಿಯು ನೇತೃತ್ವದಲ್ಲಿ ರಾಜ್ಯದ ಎಲ್ಲಾ ಶಾಸಕ, ಸಚಿವರ ಕಚೇರಿಗೆ ತೆರಳಿ ಮನವಿ ಕೊಡುವ ಕಾರ್ಯಕ್ರಮದ ಬಾಗವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ನೀಡಿದ ಬಳಿಕ ಅವರು ಮಾತನಾಡಿದರು. ಕಳೆದ ಸೆಪ್ಟಂಬರ್ ೮ರಂದು ಬೆಂಗಳೂರು ಪ್ರೀಡಂಪಾರ್ಕ್‌ನಲ್ಲಿ ಸುಮಾರು ೩೦,೦೦೦ ಕಾರ್ಮಿಕರ ಆಕ್ರೋಶ ರ್‍ಯಾಲಿ ನಡೆದಾಗ ಸರಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ. ಜೊತೆಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲು ಸಭೆ ನಡೆಸುತ್ತೇವೆ ಎಂದು ಹೇಳಿ ನಿರ್ಗಮಿಸಿದ್ದರು.


ಆದರೆ ಬಳಿಕ ಸಭೆ ನಡೆಸದೆ ಮಾತು ತಪ್ಪಿದ ವಚನ ಭೃಷ್ಟ ಸರಕಾರ ವಿರುದ್ಧ ಈ ಹೋರಾಟ ನಡೆಸಲಾಗುತ್ತಿದೆ. ಮುಂದೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಹೇಳಿದರು. ಸಿಐಟಿಯು ದ.ಕ. ಜಿಲ್ಲಾ ಸಮಿತಿ ಸದಸ್ಯೆ ಜಯಶ್ರೀ, ಬೀಡಿ ಫೆಡರೇಶನ್‌ನ ಪುಷ್ಪ, ಮಹಿಳಾ ಸಂಘದ ಕಿರಣಪ್ರಭಾ, ಕಟ್ಟಡ ಕಾರ್ಮಿಕ ಸಂಘದ ರಾಮಚಂದ್ರ, ವಿದ್ಯಾರ್ಥಿ ರಂಗದ ಮುಖಂಡ ವಿನುಶರಮಣ, ಅಶ್ವಿತ ಮೊದಲಾದವರು ಉಪಸ್ಥಿತರಿದ್ದರು.









