






ಕುಕ್ಕೇಡಿ :ದೇವಾಡಿಗರ ಲಕ್ಷ್ಮೀ ನರಸಿಂಹ ಸೇವಾ ಘಟಕ ಮಾಲಾಡಿ – ಕುಕ್ಕೇಡಿ ಇದರ ವಾರ್ಷಿಕ ಮಹಾಸಭೆಯು ಘಟಕದ ಅಧ್ಯಕ್ಷ ಬಾಬು ದೇವಾಡಿಗರ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ, ದೇವಾಡಿಗರ ಸುಧಾರಕ ಸಂಘ ಅಲಂಗಾರು ಕಡಬ ಇದರ ಕಾರ್ಯದರ್ಶಿ ಶಿವಾನಂದ ದೇವಾಡಿಗ ಭಾಗವಹಿಸಿದ್ದರು.


ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದಯ್ಯ ದೇವಾಡಿಗ, ಉಪಾಧ್ಯಕ್ಷರಾಗಿ ಮೋಹನ ದೇವಾಡಿಗ, ಕಾರ್ಯದರ್ಶಿಯಾಗಿ ವಿಠಲ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ರಾಜೀವಿ ದೇವಾಡಿಗ, ಕೋಶಾಧಿಕಾರಿ ಯಾಗಿ ಹರೀಶ ದೇವಾಡಿಗ, ಸ್ವ ಸಹಾಯ ಸಂಘದ ಕಾರ್ಯದರ್ಶಿ ಯಾಗಿ ಪ್ರದೀಪ್ ದೇವಾಡಿಗ ಹಾಗೂ ಇವರ ಇತರ ಒಂಬತ್ತು ಮಂದಿಯನ್ನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಹರೀಶ ದೇವಾಡಿಗ ಸ್ವಾಗತಿಸಿದರು. ವಿಶ್ವನಾಥ ದೇವಾಡಿಗ ಕೆ. ಸಿ.ಕಾರ್ಯಕ್ರಮ ನಿರೂಪಿಸಿದರು. ವಿಠಲ್ ದೇವಾಡಿಗ ಧನ್ಯವಾದವಿತ್ತರು.









