ವಲಯ ಮಟ್ಟದ ಬಾಲಕಿಯರ ಟೇಬಲ್ ಟೆನಿಸ್, ಉಜಿರೆ ಶ್ರೀ ಧ. ಮ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ತಂಡ ಚಾಂಪಿಯನ್

0

ಉಜಿರೆ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಶ್ರೀನಿವಾಸ್ ನರ್ಸಿಂಗ್ ಕಾಲೇಜ್ ವಳಚ್ಚಿಲ್ ಮಂಗಳೂರು ಇಲ್ಲಿ ನಡೆದ ಮಂಗಳೂರು ವಲಯ ಮಟ್ಟದ ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಕಾಲೇಜಿನ ವಿದ್ಯಾರ್ಥಿನಿಗಳ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ.

ಸೆಮಿ ಫೈನಲ್ ಪಂದ್ಯಾಟದಲ್ಲಿ ಮುನಿಯಾಲ್ ಆಯುರ್ವೇದ ಮೆಡಿಕಲ್ ಕಾಲೇಜು ತಂಡವನ್ನು 3 – 0 ಅಂಕಗಳ ನೇರಸಟ್ಟಿಂದ ಸೋಲಿಸಿ ಫೈನಲ್ ಪ್ರವೇಶಿಸಿತು, ಫೈನಲ್ ಪಂದ್ಯಾಟದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಫಿಸಿಯೋಥೆರಪಿ ಕಾಲೇಜು ತಂಡವನ್ನು 3 – 1 ಅಂತರದಲ್ಲಿ ಪರಾಬವಗೊಳಿಸಿ ಚಾಂಪಿಯನ್ ಆಗಿ ಮೂಡಿಬಂದಿತು.

LEAVE A REPLY

Please enter your comment!
Please enter your name here