






ಬೆಳ್ತಂಗಡಿ : ಬೆಳ್ತಂಗಡಿ ತಾಲೂಕುಔಷಧ ವ್ಯಾಪಾರಸ್ಥರ ಸಂಘ ಜಾಗತಿಕ ಔಷಧ ತಜ್ಞರ ದಿನಾಚರಣೆ ಹಾಗೂ ಸಂಘದ ವಾರ್ಷಿಕ ಮಹಾಸಭೆಯು ಸೆ. 27ರಂದು ಅರಳಿ ರಸ್ತೆ ಉಜಿರೆ ಕಾಶಿಬೆಟ್ಟು ರೋಟರಿ ಸೇವಾ ಭವನದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಔಷಧ ನಿಯಂತ್ರಕ ಕೆ.ವಿ. ನಾಗರಾಜ ನೆರವೇರಿಸಿ ಶುಭ ಹಾರೈಸಿದರು.ಉಡುಪಿ/ದ.ಕ. ಜಿಲ್ಲೆ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯ್ಡ್ ಉಪಸ್ಥಿತರಿದ್ದರು.


ಬೆಳ್ತಂಗಡಿ ತಾಲೂಕು ಓಷಧಿ ವ್ಯವಪಾರಸ್ಥ ಸಂಘದ ಅಧ್ಯಕ್ಷ ಉದಯ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ| ಸದಾನಂದ ಪೂಜಾರಿ,ಉಜಿರೆ ಎಸ್.ಡಿ.ಎಂ. ಹಾಸ್ಪಿಟಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನ ಎಂ.ಡಿ. ಜನಾರ್ದನ ಎಂ.,ಸೌತ್ ಕೆನರಾ ಡಿಸ್ಟ್ರಿಕ್ ಕೆಮಿಸ್ಟ್ ಎಂಡ್ ಡ್ರಗಿಸ್ಟ್ ಅಸೋಸಿಯೇಶನ್ ದ.ಕ. ಅಧ್ಯಕ್ಷಅರುಣ್ ಕುಮಾರ್ ಶೆಟ್ಟಿ, ದ.ಕ ಸೌತ್ ಕೆನರಾ ಡಿಸ್ಟ್ರಿಕ್ ಕೆಮಿಸ್ಟ್ ಎಂಡ್ ಡ್ರಗಿಸ್ಟ್ ಅಸೋಸಿಯೇಶನ್ ಕಾರ್ಯದರ್ಶಿಡಾ| ಎ.ಕೆ. ಜಮಾಲ್, ಭಾಗವಹಿಸಿದ್ದರು.
ತಾಲೂಕು ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡಿಸ್ ಎಸ್.ಎ. ಮೆಡಿಕಲ್ಸ್ ಉಜಿರೆ,ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.ಕೋರ್ ಕಮಿಟಿ ಸದಸ್ಯರು ಉದಯ ಕುಮಾರ್ ಜೈನ್ ಮಹಾವೀರ ಮೆಡಿಕಲ್ಸ್ ಮಡಂತ್ಯಾರು, ಪ್ರಕಾಶ್ ಫೆrnಡಿಸ್ ಎಸ್. ಎ. ಮೆಡಿಕಲ್ಸ್ ಉಜಿರೆ,ಗುರುರಾಜ್ ಪಡುವೆಟ್ನಾಯ ಗುರುದೇವ್ ಮೆಡಿಕಲ್ಸ್ ಉಜಿರೆ, ಶ್ರೀಧರ್ ಕೆ. ವಿ.ಸುರಕ್ಷಾ ಮೆಡಿಕಲ್ ಉಜಿರೆ, ನವೀನ್ ಚಂದ್ರಕಜೆಕಾರು ಮೆಡಿಕಲ್ಸ್ ಉದೆರೆ,ವೆಂಕಟರಮಣ ಭಟ್ ಚಂದ್ರ ಮೆಡಿಕಲ್ಸ್ ಗುರುವಾಯುಕೆರೆ, ಎಸ್. ಆರ್. ಪ್ರಕಾಶ್ ಮಹಾಗಣಪತಿ ಎಂಟರ್ಪ್ರೈಸಸ್ ಬೆಳ್ತಂಗಡಿ, ಸುಜೀತ್ ಭಿಡೆಭಿಡೆ ಮೆಡಿಕಲ್ಸ್ ಮುಂಡಾಜೆ, ಚಂದ್ರಶೇಖರ್ ಅಶ್ವಿನಿ ಮೆಡಿಕಲ್ಸ್ ಬೆಳ್ತಂಗಡಿ, ಮಾಧವ ಗೌಡ, ಗಣೇಶ್ ಮೆಡಿಕಲ್ ಬೆಳ್ತಂಗಡಿ,ಡಾ| ಸಂತೋಷ್ ಕಲ್ಲೇರಿ ಸಿಂಧೂರ ಮೆಡಿಕಲ್ಸ್ ಕಲ್ಲೇರಿ, ರಮಾನಂದ ಬಿ. ಎಂ. ಮೆಡಿಕಲ್ ಉಜಿರೆ. ಉಪಸ್ಥಿತರಿದ್ದರು.









