






ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕೂಲಿ ಕಾರ್ಮಿಕ ಕರಿಯ ಮುಗೇರ ಅವರ ಮನೆಯಲ್ಲಿ ಆನಾರೋಗ್ಯ ಮತ್ತು ಆರ್ಥಿಕ ಸಮಸ್ಯೆ ಎದುರಾಗಿದ್ದು ಕುಟುಂಬ ಸಂಕಷ್ಟದಲ್ಲಿರುವ ವುವರ ಅರಿತ ಮುಗೇರ ಹಿತಚಿಂತನ ವೇದಿಕೆ ಬೆಳ್ತಂಗಡಿ ಇದರ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.
ಅನಾರೋಗ್ಯದಿಂದಿರುವ ಕರಿಯ ಮುಗೇರರ ಪತ್ನಿ, ಇಬ್ಬರು ಮಕ್ಕಳು ಹಾಗೂ ವಯೋವೃದ್ದರಾದ ಕರಿಯ ಮುಗೇರ ಅವರ ಕ್ಷೇಮ ವಿಚಾರಿಸಿ, ಧೈರ್ಯ ತುಂಬಲಾಯಿತು. ಸರ್ಕಾರದಿಂದ ಸಿಗಬಹುದಾದ ಮೂಲಭೂತ ಸೌಕರ್ಯಗಳನ್ನು ಆ ಕುಟುಂಬಕ್ಕೆ ಒದಗಿಸಿಕೊಡುವ ಭರವಸೆಯನ್ನೂ ಈಸಂದರ್ಭ ನೀಡಲಾಯಿತು.


ಮುಗೇರ ಸಮಾಜದ ಹಿರಿಯರಾದ ಲಿಂಗಪ್ಪ ಮಂಜೊಟ್ಟಿ, ಸಂಘದ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಕಾರ್ಯದರ್ಶಿ ಸುಂದರ ಎ ಇಂದಬೆಟ್ಟು, ಕೋಶಾಧಿಕಾರಿ ಜಗದೀಶ್ ಕಕ್ಕಿಂಜೆ, ಸಂಚಾಲಕಿ,ಜಿ.ಪಂ ಮಾಜಿ ಅಧ್ಯಕ್ಷೆ ಸಿ ಕೆ ಚಂದ್ರಕಲಾ ಮತ್ತು ಸದಸ್ಯರಾದ ಜಯ ಕುಮಾರ್ ಪುಂಜಾಲಕಟ್ಟೆ, ಆನಂದ ಎಂ ಆರ್ ಕಕ್ಕಿಂಜೆ, ಉಮೇಶ್ ಕಾಯರ್ತಡ್ಕ, ಉಮೇಶ್ ಮಂಜೊಟ್ಟಿ, ಮತ್ತು ರಾಜೇಶ್ ಕಾಯರ್ತಡ್ಕ ಇವರುಗಳು ಉಪಸ್ಥಿತರಿದ್ದರು.









