






ಅಳದಂಗಡಿ : ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರಷರ ಕಬ್ಬಡಿ ತಂಡವು ಬಲಿಷ್ಠ ಇರಾನ್ ತಂಡವನ್ನು ಮಣಿಸಿ ಮತ್ತೊಮ್ಮೆ ಚಿನ್ನಕ್ಕೆ ಮುತ್ತಿಕ್ಕುವ ಮೂಲಕ ಕಬ್ಬಡಿ ಲೋಕದ ಸರದಾರ asಆಗಿ ಮೆರೆದಿದೆ. ಆದರೆ, ಭಾರತದ ಈ ಐತಿಹಾಸಿಕ ವಿಜಯಕ್ಕೂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಮಾನ್ವಿತ ಅಳದಂಗಡಿ ಕಲ್ಲುರ್ಟಿ ಕ್ಷೇತ್ರಕ್ಕೂ ರೋಚಕ ನಂಟಿದೆ ಎಂಬುದು ಅಚ್ಚರಿಯಾದರೂ ಸತ್ಯ!
ಹೌದು, ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್ ಅವರು ಕೆಲವು ತಿಂಗಳುಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ಕಲ್ಲುರ್ಟಿ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಕಲ್ಲುರ್ಟಿ ತಾಯಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದರೆ ಮರಳಿ ಕ್ಷೇತ್ರಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದರು. ಆ ಮಾತಿನಂತೆ ಈಗ ಭಾರತ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದು, ನಾಯಕ ಪವನ್ ಸೆಹ್ರಾವತ್ ಅವರು ಕೊಟ್ಟ ಮಾತಿನಂತೆ ಹರಕೆ ತೀರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಭಾರತದ ವಿಜಯದ ಬಳಿಕ ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸ್ವರರಾದ ಶಿವಪ್ರಸಾದ್ ಅಜಿಲ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿರುವ ಪವನ್ ಸೆಹ್ರಾವತ್, ಕಲ್ಲುರ್ಟಿ ದೈವದ ಅನುಗ್ರಹದಿಂದಲೇ ಭಾರತ ತಂಡಕ್ಕೆ ಚಿನ್ನ ಒಲಿದುಬಂದಿದೆ ಎಂದು ಸ್ಮರಿಸಿದ್ದಾರೆ. ಅಲ್ಲದೆ, ಭಾರತಕ್ಕೆ ಹಿಂತಿರುಗಿದ ಎರಡನೇ ಅಥವಾ ಮೂರನೇ ವಾರದಲ್ಲಿ ನೇರವಾಗಿ ದೈವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸುವುದಾಗಿ ತಿಳಿಸಿದ್ದಾರೆ.ಗಣ್ಯರ ಶ್ರದ್ಧಾ ಕೇಂದ್ರ ಹಾಗೂ ರೋಚಕ ಇತಿಹಾಸಅಳದಂಗಡಿ ಶ್ರೀ ಸತ್ಯದೇವತೆ ಕಲ್ಲುರ್ಟಿ ಕ್ಷೇತ್ರವು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರ ಅಚ್ಚುಮೆಚ್ಚಿನ ಶ್ರದ್ಧಾ ಕೇಂದ್ರವಾಗಿದೆ.


ಕೇವಲ ಸಾಮಾನ್ಯ ಜನರಲ್ಲದೆ, ನಟ ದರ್ಶನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ದಿವಂಗತ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ದಿಗ್ಗಜ ರಾಜಕೀಯ ನಾಯಕರು ಸಂಕಷ್ಟದ ಸಂದರ್ಭದಲ್ಲಿ ಈ ದೈವದ ಮೊರೆ ಹೋಗಿ ಅಭಯ ಪಡೆದ ಭವ್ಯ ಇತಿಹಾಸ ಈ ಕ್ಷೇತ್ರಕ್ಕಿದೆ. ಸುಮಾರು 800 ವರ್ಷಗಳ ರೋಚಕ ಹಿನ್ನೆಲೆ ಹೊಂದಿರುವ ಈ ದೈವವು, ಶ್ರವಣಬೆಳಗೊಳದ ಗೊಮ್ಮಟೇಶ್ವರನನ್ನು ಕೆತ್ತಿದ ಶಿಲ್ಪಿಗಳಾದ ‘ಕಲ್ಕುಡ ಮತ್ತು ಕಲ್ಲುರ್ಟಿ’ ಎಂಬ ಅಣ್ಣ-ತಂಗಿಯರ ಕಥೆಯನ್ನು ಹೊಂದಿದೆ.
ರಾಜರ ವಂಚನೆಗೆ ಒಳಗಾಗಿ, ಕೈ-ಕಾಲು ಕಳೆದುಕೊಂಡು ನ್ಯಾಯಕ್ಕಾಗಿ ದೈವೀಕರಣಗೊಂಡ ದಿವ್ಯ ಶಕ್ತಿಗಳಿವು ಎಂಬ ನಂಬಿಕೆಯಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರಣಿಕ ಶಕ್ತಿಹಿಂದೆ 1987ರವರೆಗೆ ಕಟ್ಟೂರು ಎಂಬಲ್ಲಿದ್ದ ಈ ಗುಡಿ, ಬಳಿಕ ಕಾರ್ಕಳ-ಬೆಳ್ತಂಗಡಿ ಮಾರ್ಗಮಧ್ಯೆ ಅಳದಂಗಡಿಯಲ್ಲಿ ನೂತನವಾಗಿ ತಲೆಎತ್ತಿತು. ಆರಂಭದಲ್ಲಿ ವರ್ಷಕ್ಕೆ ಕೇವಲ 5-6 ಹರಕೆ ಕೋಲಗಳು ಮಾತ್ರ ನಡೆಯುತ್ತಿದ್ದವು.
ಆದರೆ ದೈವದ ಕಾರಣಿಕ ಶಕ್ತಿ ದಿನೇ ದಿನೇ ಜಗಜ್ಜಾಹೀರಾಗುತ್ತ Fಸ ಸಾಗಿದಂತೆ, ಇಂದು ವರ್ಷಕ್ಕೆ ಬರೋಬ್ಬರಿ 300ಕ್ಕೂ ಅಧಿಕ ಹರಕೆ ಕೋಲಗಳು ಜರುಗುತ್ತಿವೆ! ಕಳೆದ 10 ವರ್ಷಗಳ ಅವಧಿಯಲ್ಲಿ 30,000ಕ್ಕೂ ಹೆಚ್ಚು ಕೋಲಗಳು ನಡೆದಿರುವುದು ಈ ದೈವದ ಜಾಗೃತ ಶಕ್ತಿಗೆ ಸಾಕ್ಷಿಯಾಗಿದೆ.









