ಇಳಂತಿಲದ ಕೃತಿ ಕೈಲಾರು ಅವರಿಗೆ ಬಿಬಿಎ ಎಲ್ಎಲ್.ಬಿ ಪರೀಕ್ಷೆಯಲ್ಲಿ 5ನೇ ರ‍್ಯಾoಕ್ : ಸನ್ಮಾನ

0

ಬೆಳ್ತಂಗಡಿ: ಮೈಸೂರಿನ ಜೆಎಸ್ಎಸ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಳಂತಿಲ ಗ್ರಾಮದ ಕೈಲಾರಿನ ಕೃತಿ ಕೈಲಾರು ಅವರು ಬಿಬಿಎ ಎಲ್.ಎಲ್.ಬಿ ಪರೀಕ್ಷೆಯಲ್ಲಿ 5ನೇ ರ‍್ಯಾoಕ್ ಪಡೆದು ಸಾಧನೆ ಮಾಡಿದ್ದಾರೆ.

ಇವರನ್ನು ಸೆ.26ರಂದು ಮೈಸೂರಿನ ಜೆಎಸ್ಎಸ್ ಲಾ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದ ದಿನದಂದು ಗೌರವಿಸಿ ಸನ್ಮಾನಿಸಲಾಯಿತು. ಭರತ ನಾಟ್ಯ ಕಲಾವಿದೆಯಾಗಿರುವ ಇವರು, ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಭರತ ನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಉಪ್ಪಿನಂಗಡಿ ವಾಸ್ತುಗಿಡ ಸನ್ನಿಧಿ ಖ್ಯಾತಿಯ ಕೈಲಾರು ರಾಜಗೋಪಾಲ್ ಭಟ್ ಮತ್ತು ಸತ್ಯೇಶ್ವರಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here