






ಧರ್ಮಸ್ಥಳ:ಕನ್ಯಾಡಿ ಇಲ್ಲಿ ನಡೆಯುವ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಪೂರ್ವಭಾವಿ ಸಭೆಯು ಸೆ. 25ರಂದು ಯಶಸ್ವಿಯಾಗಿ ನೆರವೇರಿತು.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಗೆ ಆಗಮಿಸಿ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದ ಎಲ್ಲರಿಗೂ ಸಮಿತಿ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.


ಇದೇ ರೀತಿಯ ಸಹಕಾರ ಮುಂದುವರಿದರೆ ಎಲ್ಲರ ಒಗ್ಗಟ್ಟಿನಿಂದ 26ನೇ ವರ್ಷದ ಶಾರದೋತ್ಸವವನ್ನು ಇನ್ನಷ್ಟು ವಿಜೃಂಭಣೆ ಮತ್ತು ಅದ್ದೂರಿಯಿಂದ ಆಚರಿಸಬಹುದು ಎಂದು ಅಧ್ಯಕ್ಷ *ಬಾಲಕೃಷ್ಣ ನೈಮಿಷ* ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಅರುಣ್ ರಾವ್ ಮತ್ತಿಲ, ಉಮೇಶ್ ಪ್ರಭು, ಗೌರವ ಸಲಹೆಗಾರರಾಗಿ ವಿನಾಯಕ ರಾವ್, ಮನೋಹರ್ ರಾವ್ ಯು.ಬಿ, ರಾಜೇಂದ್ರ ಅಜ್ರಿ, ರವಿಜಾ ಎಸ್, ಸ್ವರ್ಣ ಗೌರಿ, ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಕಾರ್ಯದರ್ಶಿ ಯತೀಶ್ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಶ್ರೇಯಸ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.









