ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ – ರೂ. 3.71 ಲಕ್ಷ ಲಾಭ, 21% ಡಿವಿಡೆಂಡ್, ಲೀಟರ್‌ಗೆ 1 ರೂಪಾಯಿ ಬೋನಸ್ ಘೋಷಣೆ

0

ದೇವರಗುಡ್ಡೆ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.25 ರಂದು ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ಸಂಘದ ವಿಶೇಷಾಧಿಕಾರಿ ಸಂದೀಪ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮತ್ತು ಸಂಘದ ವಿಶೇಷಾಧಿಕಾರಿ ಸಂದೀಪ್ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಹಾಲಿನ ಗುಣಮಟ್ಟ, ಹಸುಗಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭದಾರಣೆ, ಪಶು ಆಹಾರ ಬಳಕೆ ಬಗ್ಗೆ ಮಾಹಿತಿ ನೀಡಿ, ಸಂಘದ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರು ಲೆಕ್ಕ ಪರಿಶೋಧನಾ ವರದಿ ಮಂಡಿಸಿ, ಸಂಘವು ರೂ.371902.47 ನಿವ್ವಳ ಲಾಭ ಗಳಿಸಿದ್ದು, ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.

ಈ ಸಾಲಿನಲ್ಲಿ ಸದಸ್ಯರಿಗೆ 21% ಡಿವಿಡೆಂಡ್ ಮತ್ತು ಹಾಲು ಪೂರೈಸುವ ಸದಸ್ಯರಿಗೆ ಪ್ರತಿ ಲೀಟರ್‌ಗೆ 1ರೂ.ವರೆಗೆ ಬೋನಸ್ ಘೋಷಿಸಲಾಯಿತು.ವರ್ಷಿತ್ ಅವರು ಸ್ವಾಗತಿಸಿ, ಶಿವಪ್ರಸಾದ್ ಅವರು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here