ಉಜಿರೆ: ಸ್ನೇಹ ಕಿರಣ ಶಾಲೆಗೆ ಲಗ್ಗೆಯಿಟ್ಟ ಬೃಹತ್ ಗಾತ್ರದ ಆಫ್ರಿಕನ್ ಬಸವನ ಹುಳು

1

ಉಜಿರೆ: ಕಳೆದ ಹಲವು ವರ್ಷಗಳಿಂದ ಅಡಿಕೆ ಮತ್ತು ಬಾಳೆ ತೋಟಗಳಲ್ಲಿ ವಿಪರೀತ ಹಾನಿ ಮಾಡುತ್ತಿದ್ದ ಬೃಹತ್ ಗಾತ್ರದ ಆಫ್ರಿಕನ್ ಬಸವನ ಹುಳುಗಳು, ಈಗ ಉಜಿರೆಯಲ್ಲಿರುವ ಸ್ನೇಹ ಕಿರಣ ನರ್ಸರಿ ಶಾಲೆಗೂ ಲಗ್ಗೆ ಇಟ್ಟಿವೆ. ​

ತೋಟಗಳ ಗಿಡ-ಮರಗಳ ಎಲೆಗಳನ್ನು ತಿಂದು ಬರೀ ದಂಡುಗಳು ಮಾತ್ರ ಉಳಿಯುವಂತೆ ಮಾಡುತ್ತಿದ್ದ ಈ ಕೀಟಗಳು, ಇದೀಗ ಶಾಲಾ ಆವರಣಕ್ಕೂ ಕಾಲಿಟ್ಟಿರುವುದರಿಂದ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹಲವು ಕೃಷಿ ತೋಟಗಳನ್ನು ಈಗಾಗಲೇ ಸರ್ವನಾಶ ಮಾಡಿರುವ ಈ ಆಫ್ರಿಕನ್ ಬಸವನ ಹುಳುಗಳ ಹಾವಳಿ, ಈಗ ಶಾಲಾ ಮಕ್ಕಳಿರುವ ಪ್ರದೇಶಕ್ಕೂ ವ್ಯಾಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

1 COMMENT

LEAVE A REPLY

Please enter your comment!
Please enter your name here