








ತುಳು ಭಾಷೆ ನಮ್ಮ ತಾಯಿ ಭಾಷೆ, ಒಂದು ಶ್ರೀಮಂತ ಸಂಸ್ಕೃತಿ. ಇಲ್ಲಿನ ನೆಲ ಜಲ ಭಾಷೆಗೆ ವಿಶೇಷ ಮಹತ್ವ ಇದೆ. ಸಾವಿರಾರು ವರ್ಷಗಳ ಇತಿಹಾಸವಿರುವ ತುಳು ಭಾಷೆಗೆ ಕರ್ನಾಟಕ ಸರಕಾರ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಘೋಷಿಸಿ, ತುಳುವರ ಅನೇಕ ವರ್ಷಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ತಾಯಿನಾಡು ನುಡಿಗೆ ಸಿಗಬೇಕಾದ ರಾಜ ಮರ್ಯಾದೆಗೆ ಕ್ಲಪ್ತ ಸಮಯದಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಂಡ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು ಜೈ ತುಳುನಾಡು ಎಂದು ಪೀತಾಂಬರ ಹೆರಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.









