ಅಂಡಿಂಜೆ: ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

0

ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಿ ಅಂಡಿಂಜೆ ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಸುದರ್ಶಿನಿ ಹೆಗ್ಡೆ ಇವರ ಉಪಸ್ಥಿತಿಯಲ್ಲಿ ಅಂಡಿಂಜೆ ಶ್ರೀ ರಾಮ ಶ್ರೀ ವಿನಾಯಕ ಭಜನಾ ಮಂದಿರ ದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಮಣಿ ಹೆಗ್ಡೆ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಶ್ವೇತಾ ಎಲ್ಲರನ್ನು ಸ್ವಾಗತಿಸಿದರು.ವೇದಿಕೆಯಲ್ಲಿ ಉಪಸ್ಥಿತಿ ಯನ್ನು ಪಡೆದಿರುವ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ ಸಂಜೀವಿನಿ ಯೋಜನೆಗಳ ಬಗ್ಗೆ ಪ್ರಸ್ತಾವಿಕ ಮಾಹಿತಿ ನೀಡಿದರು.

ಒಕ್ಕೂಟದ ವಲಯ ಮೇಲ್ವಿಚಾರಕರಾದ ಶ್ರೀ ಸ್ವಸ್ತಿಕ್ ಜೈನ್ ಒಕ್ಕೂಟದ ಪದಗ್ರಹಣ ಸದಸ್ಯರಿಗೆ ಕ್ವಿಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಲೂಕು ಆರೋಗ್ಯ ಅಧಿಕಾರಿ ಅಮ್ಮಿ ಎ ಆರೋಗ್ಯ ಪೌಷ್ಟಿಕಾಂಶ, ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಸ್ತನ ಕ್ಯಾನ್ಸರ್ ಬಗ್ಗೆ, ಗರ್ಭಕೋಶದ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಮಲ್ಲಿಕಾ ಎನ್ ಒಕ್ಕೂಟದ ಒಂದು ವರ್ಷದ ವರದಿ ಜಮಾ ಖರ್ಚು ವಿವರವನ್ನು ಸಭೆಗೆ ಮಂಡಿಸಿದ್ದು. ಅನುಮೋದನೆಯನ್ನು ಪಡೆಯಲಾಯಿತು.

ಪದಗ್ರಹಣ ನಡೆಸಿ ಹಳೆಯ ಪದಾಧಿಕಾರಿಗಳನ್ನು ಗೌರವಿಸಿ, ನೂತನ ಸದಸ್ಯರನ್ನು ಹೂ ನೀಡಿ ಬರಮಾಡಿಕೊಳ್ಳಲಾಯಿತು.ಉತ್ತಮ ದಾಖಲಾತಿ ಹೊಂದಿರುವ ಸಂಘವನ್ನು ಗುರುತಿಸಿ ಬಹುಮಾನ ನೀಡಲಾಯಿತು.

ಯಶಸ್ವಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೌಮ್ಯ ನಿರೂಪಿಸಿ ವತ್ಸಲಾ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here