ಮಚ್ಚಿನ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರಕ್ಕೆ ನೂತನ ಸಮಿತಿ ರಚನೆ

0

ಮಚ್ಚಿನ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರಕ್ಕೆ ನೂತನ ಸಮಿತಿ ರಚನೆಮಚ್ಚಿನ: ಗ್ರಾಮದ ಕುತ್ತಿನ ದತ್ತನಗರದ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ 2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಕೃಷ್ಣ ಪ್ರಭು ಮುದಲಡ್ಕ ಹಾಗೂ ವೆಂಕಪ್ಪ ಮೂಲ್ಯ ಕೊಂಬೆಟ್ಟು, ಅಧ್ಯಕ್ಷರಾಗಿ ಧರ್ಮೇಂದ್ರ ಕುಲಾಲ್ ಕೋಲಾಜೆ, ಕಾರ್ಯದರ್ಶಿಯಾಗಿ ನಿರ್ಮಿತ್ ಕೊಂಬೆಟ್ಟು, ಉಪಾಧ್ಯಕ್ಷರಾಗಿ ಕೌಶಿಕ್ ಮುದಲಡ್ಕ, ಕೋಶಾಧಿಕಾರಿಯಾಗಿ ಸಂದೀಪ್ ಆಚಾರ್ಯ ಮಾಣೂರು ಹಾಗೂ ಜೊತೆ ಕಾರ್ಯದರ್ಶಿಯಾಗಿ ಧನುಷ್ ಕೊಂಬೆಟ್ಟು ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಕೊಂಬೆಟ್ಟು, ಅರ್ಚಕ ಗೋಪಾಲಕೃಷ್ಣ ಶೆಣೈ ಕಡಂಬು ಹಾಗೂ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here