






ಗುರುವಾಯನಕೆರೆ : ಗುರುವಾಯನಕೆರೆ ಶಿವಾಜಿನಗರ ಶ್ರೀ ವೇದವ್ಯಾಸ ಶಿಶು ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆ. 6ರಂದು 2026ರಂದು ನಮ್ಮ ಮನೆ ಹವ್ಯಕ ಭವನದ ಸಭಾಂಗಣದಲ್ಲಿ ಶಿಶುಮಂದಿರದ ಅಧ್ಯಕ್ಷೆ ಇಂದುಮತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೌದ್ಧಿಕ ನೀಡಿದ ನಾರಾಯಣ, ಕಲಿಕಾ ತೆಂಕಕಾರಂದೂರು, ಕಿರಿಯ ತರಬೇತಿ ಅಧಿಕಾರಿ ಶ್ರೀ ನಾರಾಯಣ ಗುರು ಕೈಗಾರಿಕಾ ತರಬೇತಿ ಸಂಸ್ಥೆ ಕುದ್ರೋಳಿ ಮಂಗಳೂರು, ಇವರು ಮಾತನಾಡುತ್ತಾ ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಒಂದಾಗಿದೆ, ಇಂತಹ ಆಚರಣೆಗಳನ್ನು ಉಳಿಸಿ ಬೆಳೆಸುವಲ್ಲಿ ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಶಿಶುಮಂದಿರ ಬಹಳ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ವಾಮನ ಆಚಾರ್ಯ ಮಾಲಕರು ಭಾರತ ಮೋಟಾರ್ ವರ್ಕ್ಸ್ ಮತ್ತು ಸಿ ಎನ್ ಜಿ ಫಿಟ್ ಮೆಂಟ್ ಸೆಂಟರ್ ಪಾಡ್ಯಾರು ಮಜಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ ಇಂದುಮತಿಯವರು ಪುಟಾಣಿ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಯ ಸಂಸ್ಕಾರವನ್ನು ಹೇಳಿಕೊಡುವ ನಮ್ಮ ಶಿಶುಮಂದಿರದ ಕಾರ್ಯ ಚಟುವಟಿಕೆಗಳಿಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು . ವೇದಿಕೆಯಲ್ಲಿ ಮಾತೃ ಮಂಡಳಿಯ ಅಧ್ಯಕ್ಷೆ ಮೀರಾ ಉಪಸ್ಥಿತರಿದ್ದರು.


ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿಶುಮಂದಿರದ ಪುಟಾಣಿಗಳಿಗೆ ಮುದ್ದು ಕೃಷ್ಣ ಮತ್ತು ರಾಧೆ ಸ್ಪರ್ಧೆ,ಮಡಕೆ ಒಡೆಯುವ ಸ್ಪರ್ಧೆ, ಸಾರ್ವಜನಿಕರಿಗೆ ಮುದ್ದುಕೃಷ್ಣ ಸ್ಪರ್ಧೆ, ರಾಧಾಕೃಷ್ಣ ಸ್ಪರ್ಧೆ ಮತ್ತು ಯಶೋಧಕೃಷ್ಣ ಸ್ಪರ್ಧೆ ನಡೆಸಲಾಯಿತು. ಈ ಸ್ಪರ್ಧೆಯ ಪ್ರೋತ್ಸಾಹಕ ಬಹುಮಾನದ ಪ್ರಾಯೋಜಕರಾಗಿ ಕೃಷ್ಣಪ್ರಕಾಶ್ ಕೆ, ಮತ್ತು ಆಶಾ ಭಟ್ ಸಹಕರಿಸಿದರು.
ಶಿಶು ಮಂದಿರದ ಬಾಲನಂದನದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿ ಗೀತೆ, ಭಗವದ್ಗೀತಾ ಶ್ಲೋಕ ಪಠಣ ಸ್ಪರ್ಧೆ ಹಾಗೂ ಸಾರ್ವಜನಿಕ ಮಹಿಳೆಯರಿಗೆ ಮತ್ತು ಮಹನಿ ಯರಿಗೆ ಮಡಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ಕಿಶೋರ್ ಮತ್ತು ಲತಾ ದಂಪತಿಗಳ ಮಗು ಪುಟಾಣಿ ರುತ್ವ. ಕೆ ಇವರನ್ನು ತೊಟ್ಟಿಲಿಗೆ ಹಾಕುವ ಮೂಲಕ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಯಕ್ರಮಕ್ಕೆ ಶಿಶುಮಂದಿರದ ಪದಾಧಿಕಾರಿಗಳಾದ ಪ್ರಿಯದರ್ಶಿನಿ ಸುವರ್ಣ, ಸೋಮಶೇಖರ ದೇವಸ್ಯ,ರಾಮಚಂದ್ರ ಶೆಟ್ಟಿ, ರತ್ನಾಕರ ರಾವ್,ಆನಂದ ಕೋಟ್ಯಾನ್, ವಸಂತ ಶೆಟ್ಟಿ, ಬಾಲಕೃಷ್ಣ, ಶೈಲಜಾ, ರಕ್ಷಿತಾ ಶೆಟ್ಟಿ, ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.ಮಾತಾಜಿಗಳಾದ ರಮ್ಯಾ, ಜಯಶ್ರೀ, ಅಶ್ವಿನಿ ಹಾಗೂ ಮಾತೃ ಮಂಡಳಿಯ ಪದಾಧಿಕಾರಿಗಳು, ಹಾಗೂ ಮಮಿತ ಸುಧೀರ್,ಸುಪ್ರಿಯಾ ಶೆಟ್ಟಿ ಸಹಕರಿಸಿದರು. ಹವ್ಯಕ ಭವನದ ಆಡಳಿತ ಮಂಡಳಿಯವರು ಕಾರ್ಯಕ್ರಮ ನಡೆಸಲು ಸಭಾಂಗಣ ನೀಡಿ ಸಹಕರಿಸಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಸುಕನ್ಯಾ ಕಾಮತ್,ಸಮನ್ವಿತ್, ಹರಿಪ್ರಿಯ ಸಹಕರಿಸಿದರು. ಶಿಶುಮಂದಿರದಲ್ಲಿ ನಡೆದ ಪೂಜಾ ಕಾರ್ಯವನ್ನು ಚಂದ್ರಹಾಸ್ ದಾಸ್ ನೆರವೇರಿಸಿದರು. ಪ್ರಾರಂಭದಲ್ಲಿ ಶಿಶುಮಂದಿರದ ಪುಟಾಣಿಗಳು ಪ್ರಾರ್ಥನೆಗೈದರು, ರಮ್ಯ ಮಾತಾಜಿ ಸ್ವಾಗತಿಸಿ, ಸುಧಾಮಣಿ ರಮಾನಂದ ನಿರೂಪಿಸಿ, ರಚನಾ ಕಾಶಿನಾಥ್ ಧನ್ಯವಾದ ನೀಡಿದರು.









